ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಫೆಬ್ರವರಿ 13 ರಂದು ಮಧ್ಯಾಹ್ನ 1 ಗಂಟೆಗೆ ನಗರದ ತೇರಿನ ಬೀದಿಯಲ್ಲಿ ನಡೆಯಲಿದೆ.
ಇದರ ಅಂಗವಾಗಿ ನಿತ್ಯ ವಿವಿಧ ವಾಹನೋತ್ಸವಗಳು, ವಿಶೇಷ ಪೂಜಾ ಕಾರ‍್ಯಕ್ರಮಗಳಿರುತ್ತವೆ. ಫೆಬ್ರವರಿ 14 ರಂದು ಹಗಲು ಪರಿಷೆಯಿರುತ್ತದೆ.
ಜಾತ್ರಾ ನಾಟಕೋತ್ಸವ
ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ, ಬ್ರಹ್ಮರಥೋತ್ಸವದ ಅಂಗವಾಗಿ ಫೆಬ್ರವರಿ 13ಮತ್ತು 14 ರಂದು ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 13 ರಂದು ಸಂಜೆ 6 ರಿಂದ ಗಡಾಚಾರಿ ವೆಂಕಟೇಶ್ ತಂಡದವರಿಂದ ಗೊರವನ ಕುಣಿತ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮವಿದೆ.
ಸಂಜೆ 6.30ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದೆ.
ರಾತ್ರಿ 9 ಗಂಟೆಗೆ ಶ್ರೀ ಅಭಯ ಆಂಜನೇಯ ಕೃಪಾಪೋಷಿತ ನಾಟಕ ಮಂಡಲಿ, ಸಂಜಯ ನಗರ ವತಿಯಿಂದ ಚಂದ್ರಶೇಖರ್ ನಿರ್ದೇಶನದ ಸತ್ಯ ಹರಿಶ್ಚಂದ್ರ ಪೌರಾಣಿಕ ನಾಟಕ ಪ್ರದರ್ಶನವಿದೆ.
ಫೆಬ್ರವರಿ 14 ರಂದು ಸಂಜೆ 6 ಕ್ಕೆ ಶಿವರಾಜ್ ನಿರ್ದೇಶನದ ಗೆಲುವು ಯಾರದು ಸಾಮಾಜಿಕ ನಾಟಕ ಪ್ರದರ್ಶನವಿದೆ. ಸಂಜೆ 7ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ರಾತ್ರಿ 9 ಗಂಟೆಗೆ ಪದ್ಮಪ್ರಿಯ ಕೃಪಾಪೋಷಿತ ನಾಟಕ ಮಂಡಲಿಯವರಿಂದ ಎಸ್.ಬಸವರಾಜಯ್ಯ ನಿರ್ದೇಶನದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಿದೆ.