Site icon Harithalekhani

KPCC ಅಧ್ಯಕ್ಷ ಸ್ಥಾನ ಬದಲಾವಣೆ .. ಊಹಾಪೋಹದ ಸುದ್ದಿ ಮಾಡಬೇಡಿ ಎಂದು ಖರ್ಗೆ ಕಿಡಿ

KPCC president change .. Kharge not to speculate news

KPCC president change .. Kharge not to speculate news

ಕಲಬುರಗಿ: ಮಾಧ್ಯಮಗಳು ಸರ್ಕಾರವನ್ನು ಅಸ್ತಿರಗೊಳಿಸುವಂತೆ ಊಹಾಪೋಹಗಳ ಸುದ್ದಿ ಪ್ರಸಾರ ಮಾಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದರು.

ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಮಾತನಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡದಿರುವಂತೆ ಸಲಹೆ ನೀಡಿದರು.

ನಾನು ಎಐಸಿಸಿ ಅಧ್ಯಕ್ಷನಾಗಿದ್ದೀನಿ.. ನಮ್ಮ ರಾಜ್ಯದವರು ಎಂಬ ಸಲಿಗೆ ಇರುತ್ತೆ, ಕರೆ ಮಾಡಿ ಅನೇಕ ಸಚಿವರು ಬಂದು ಭೇಟಿಯಾಗುತ್ತಾರೆ ಅದಕ್ಕೆಲ್ಲ ನೀವು ಬಣ್ಣ ಕಟ್ಟಬಾರದು.

ಪರಮೇಶ್ವರ್ ಬಂದ ಭೇಟಿಯಾದ ಬರ್ತಾರೆ, ಶಿವಕುಮಾರ್ ಬಂದ ಭೇಟಿಯಾದ, ಜಾರಕಿಹೋಳಿ ಬಂದ ಭೇಟಿಯಾದ, ಸಿದ್ದರಾಮಯ್ಯ ಬರುತ್ತಾರೆ.. ಅದನ್ನೇ ಮುಂದಿಟ್ಟುಕೊಂಡು ಏನೆಲ್ಲ ಬರೆದು ಸರ್ಕಾರವನ್ನು ಡಿಸ್ಟರ್ಬ್ ಮಾಡಬೇಡಿ.

ಸರ್ಕಾರವನ್ನು ಅಸ್ತಿರಗೊಳಿಸುವ ಹೆಚ್ಚನ ಪಾತ್ರ ಮಾಧ್ಯಮಗಳು ಮಾಡ್ತಾ ಇವೆ.. ಏನಾದ್ರೂ ಹೇಳುದ್ರೆ ಕೋಪ ಮಾಡ್ಕೋತಾರೆ.. ಮಾಧ್ಯಮಗಳಿಂದನೇ ಗೊಂದಲ ಸೃಷ್ಟಿ ಆಗ್ತಾ ಇದೆ ಎಂದರು.

ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿ, ನೀವ್ ಏನೋ ಏನೋ ಬಣ್ಣ ಕಟ್ಟೋದ್ ಬೇಡ, ಒರಿಸ್ಸಾ ಆಗಿದೆ ಹಿಂದುಳಿದ ವರ್ಗದವರನ್ನು ಮಾಡಲಾಗಿದೆ. ನಂತರ ಒಂದ್ ಆದ ಮೇಲೆ ಒಂದ್ ಆಗುತ್ತೆ.

ನಾ ಇಂತದ್ದೆ ಕರ್ನಾಟಕ ಎಂದು ಹೇಳಲಾಗಲ್ಲ.. ನಿಮಗೆ ಹೇಳೋದು ಇಲ್ಲ. ಏಕೆಂದರೆ ನೀವ್ ಅದನ್ನು ತಿರುಚಿ, ಮಾಲ್ ಮಸಾಲ್ ಹಚ್ಚುತ್ತೀರಿ..ಅದಕ್ಕೆ ಬಹಳ ಜನ ನಿಮಗೆ ನಿಜ ಹೇಳೋದಿಲ್ಲ. ನಾವ್ ಒಂದ್ ಹೇಳುದ್ರೆ ನಿಮ್ ಆಫೀಸ್ ಓದ ನಂತರ ಮತ್ತೊಂದು ಪ್ರಸಾರ ಆಗುತ್ತೆ.

ಒಂದಾದ ಮೇಲ್ ಒಂದ್ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡ್ತಾ ಇದ್ದೀವಿ. ಮತ್ತೊಂದೆರಡು ದಿನಗಳಲ್ಲಿ ಎರಡು ಮೂರು ಸ್ಟೇಟ್ ಮಾಡಲಾಗುವುದು ಎಂದರು.

Exit mobile version