ಮೈಸೂರು: ತಿರುಮಕೂಡಲು ನರಸೀಪುರದ ಸಂಗಮದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಕುಂಭಮೇಳದಲ್ಲಿ (Dakshina Kumbha Mela) ಪುಣ್ಯಸ್ನಾನ ಮಾಡಲು ಜನಸಾಗರವೇ ಹರಿದು ಬರುತ್ತಿದೆ.

ರಾಜ್ಯದ ನಾನಾ ಜಿಲ್ಲೆಗಳು ಸೇರಿ ನೆರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಿರುವುದರಿಂದ ತ್ರಿವೇಣಿ ಸಂಗಮ ಕಳೆಗಟ್ಟುತಿದ್ದು, ಬೆಳಗ್ಗೆಯಿಂದ ನದಿಯಲ್ಲಿಸ್ನಾನ ಮಾಡಲು ಜನ ಸೇರುತ್ತಿದ್ದಾರೆ.
ಶ್ರೀ ಅಗಸ್ತೇಶ್ವರ ಹಾಗೂ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯಗಳಲ್ಲಿ ಜನರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿಕ ಸಟಿಕ ಸರೋವರ ನದಿಗಳ ಸಂಗಮದ ಕ್ಷೇತ್ರದಲ್ಲಿ 6 ವರ್ಷಗಳ ಬಳಿಕ ಕುಂಭಮೇಳ ಉತ್ಸವ ಆಯೋಜನೆಗೊಂಡಿದೆ.
ಸೋಮ ವಾರದಿಂದ ಆರಂಭಗೊಂಡಿರುವ ಕುಂಭಮೇಳ ಜನರ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಯಾಗ ಮಂಟಪದಲ್ಲಿ ಹೋಮ ಹವನಗಳು ಧಾರ್ಮಿಕ ವಿಧಿ ವಿಧಾನದಂತೆ ನಡೆಯುತ್ತಿವೆ.
ಯಾವುದೇ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತ ಕ್ರಮವನ್ನು ಕೈಗೊಂಡಿದ್ದು, ತ್ರಿವೇಣಿ ಸಂಗಮ ಪ್ರವೇಶ, ಆಸುಪಾಸಿನಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದೆ.
ನದಿ ಪಾತ್ರದ 3 ಕಡೆ ಸ್ನಾನ ಘಟ್ಟದ ಬಳಿ ಪುಣ್ಯ ಸ್ಥಾನ ಮಾಡಲು ಸುರಕ್ಷಿತವಾದ ಸ್ಥಳಗಳನ್ನು ಗುರುತಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.
ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪುಣ್ಯ ಸ್ನಾನ

ಟಿ.ನರಸೀಪುರದ ಸಂಗಮದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಕುಂಭಮೇಳದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿಬಣದ ಕಾರ್ಯಕರ್ತರು ಪುಣ್ಯಸ್ನಾನ ಮಾಡಿ, ಆರತಿ ಬೆಳಗಿದರು.
ಈ ವೇಳೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಶಿವರಾಜ್ ಗೌಡ, ಕಾರ್ಯದರ್ಶಿ ಲೋಕೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಯಂತ್, ಮುಖಂಡರಾದ ಪರಮೇಶ್, ಸೋಮು, ಮಂಜು, ಹೇಮಂತ್ ಮತ್ತಿತರರಿದ್ದರು.