ಬೆಂಗಳೂರು: ಉತ್ತರ ಪ್ರದೇಶದ ಪ್ರಯೋಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ (Maha Kumbhamela) ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದು, ಕೋಟ್ಯಾಂತರ ಜನ ಭೇಟಿ ನೀಡಿ, ಪುಣ್ಯ ಸ್ನಾನ ಮಾಡುತ್ತಿದ್ದಾರೆ.
144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಮಹಾ ಕುಂಭಮೇಳಕ್ಕೆ ಸಮರೋಪಾದಿಯಲ್ಲಿ ದೇಶ, ವಿದೇಶಗಳಿಂದ ಭಕ್ತರು ತೆರಳುತ್ತಿರುವುದರಿಂದ ಅನೇಕ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಕಾರಣ, ಪೊಲೀಸರು ಕುಂಭಮೇಳಕ್ಕೆ ಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಮತ್ತೊಂದೆಡೆ ಮಹಾಕುಂಭಮೇಳದಲ್ಲಿನ ಅವ್ಯವಸ್ಥೆ ಪದೇ ಪದೇ ಸುದ್ದಿಯಾಗುತ್ತಿದ್ದು, ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ಅನೇಕರು ಸಾವನಪ್ಪಿದ್ದಾರೆ.
ಇದರ ಬೆನ್ನಲ್ಲೇ ಕುಂಭಮೇಳಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ, ಸಿಎಂ ಯೋಗಿ ಸರ್ಕಾರ ಹೇಳಿಕೆ ಸುಳ್ಳು, ಸ್ವಚ್ಚತೆ ಇಲ್ಲವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತೆ, ಕನ್ನಡಿಗನ ವಿಡಿಯೋ ವೈರಲ್ ಆಗಿದೆ.
ಕನ್ನಡದ ಹರ್ಷವರ್ಧನ್.ಕನ್ನಡಿಗ ಎನ್ನುವವರು ಮಹಾ ಕುಂಭ ಮೇಳಕ್ಕೆ ಹೋಗಿ ಅಲ್ಲಿನ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲ, ಪವಿತ್ರ ಸ್ನಾನ ಮಾಡಲು ಕೂಡ ನೀರಿನ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭ ಮೇಳಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಿಎಂ ಯೋಗಿ ಆದಿತ್ಯ ನಾಥ್ ಅವರು, 40 ಕೋಟಿ ಭಕ್ತರು ಬರಬಹುದೆಂದು ಊಹಿಸಲಾಗಿದೆ. ಆದರೆ ನಾವು 100ಕೋಟಿಗೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದರು. ಆದರೆ ಎಲ್ಲಾ ಸುಳ್ಳು ಈ ರೀತಿ ಏನೂ ಇಲ್ಲ.
ಹೌದು ನೂರಲ್ಲದಿದ್ದರೆ 200ಕೋಟಿ ಬರುಬಹುದು ಯಾರೆಂದರೆ ಉತ್ತರ ಭಾರತೀಯರು, ಅವರಿಗೆ ಸ್ವಚ್ಚತೆ ಬಗ್ಗೆ ಅಗತ್ಯ ಇಲ್ಲ.. ಆದರೆ ದಕ್ಷಿಣ ಭಾರತೀಯರಿಗೆ ಸ್ವಚ್ಚತೆ ಎಷ್ಟು ಪ್ರಮುಖ ವಾದದ್ದು ಎಂಬುದು ನಿಮಗೆ ತಿಳಿದಿದೆ.
ಇಲ್ಲಿನ ಶೌಚಾಲಯ ಬಳಸು ಸಾಧ್ಯವಾಗುತ್ತಿಲ್ಲ. ವೃದ್ಧರಿಗೆ ಯಾವುದೇ ವಾಹನ ವ್ಯವಸ್ಥೆ ಇಲ್ಲ, ಹಲವು ಕಿಲೋಮೀಟರ್ ದೂರದಿಂದ ನಡೆದು ಬರಬೇಕಿದೆ. ಇಲ್ಲಿಗೆ ಬಂದರೆ ನದಿಯಲ್ಲಿ ಮಕ್ಕಳ ಮೊಣಕಾಲು ಕೂಡ ಮುಳುಗುವುದಿಲ್ಲ. ಇದರಲ್ಲಿ ಹೇಗೆ. ಚೆಂಬಲ್ಲಿ ನೀರು ಸುರಿದುಕೊಳ್ಳಬೇಕು.
ಅಷ್ಟೇ ಅಲ್ಲದೆ ಕನ್ನಡ ಸೇರಿ ಬೇರೆ ಭಾಷೆ ಬೇಡ ಇಂಗ್ಲೀಷ್ ಅಲ್ಲಿಕೂಡ ಸರಿಯಾದ ಸೂಚನಾ ಫಲಕದ ವ್ಯವಸ್ಥೆ ಕೂಡ ಮಾಡಿಲ್ಲ. ಕೊಳಚೆ ನೀರು ನದಿಗೆ ಸೇರುತ್ತದೆ ಅದೇ ನೀರಿನಲ್ಲಿ ಪವಿತ್ರ ಸ್ನಾನ ಮಾಡಲಾಗುತ್ತದೆ. ಎಂದು ವಿಡಿಯೋದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾ ಕುಂಭ ಮೇಳಕ್ಕೆ ಕುಟುಂಬ ಸಮೇತರಾಗಿ ಬಂದರೆ ಬಹಳ ಕಷ್ಟವಾಗುತ್ತದೆ. ದಯವಿಟ್ಟು ಕನ್ನಡಿಗರು ಯಾರು ಬರಬೇಡಿ ಕರ್ನಾಟಕದಲ್ಲೇ ಕುಂಭ ಮೇಳ ಆರಂಭವಾಗಿದೆ ಅಲ್ಲೇ ಪವಿತ್ರ ಸ್ನಾನ ಮಾಡಿ, ಅಲ್ಲಿನ ದೇವಸ್ಥಾನಕ್ಕೆ ತೆರಳಿ, ಯುವಕರು ಬರುವುದಾದರೆ, ಚಿಕ್ಕ ಲಗೇಜ್ ಬ್ಯಾಗ್ ಮಾತ್ರ ತನ್ನಿ ಎಂದು ಹೇಳಿದ್ದಾರೆ.
ಇನ್ನೂ ಇದೇ ವ್ಯಕ್ತಿ ಕುಂಭಮೇಳಕ್ಕೆ ತೆರಳಿದ ಆರಂಭದಲ್ಲಿ ಮೆಚ್ಚಿಗೆಯ ಮಾತುಗಳನ್ನು ಆಡಿದ್ದು, ವದಂತಿ ನಂಬಬೇಡಿ ಎಂದೂ ಕೂಡ ವಿಡಿಯೋ ಮಾಡಿದ್ದಾರೆ.