Harithalekhani

Doddaballapura: SJCR ಶಾಲೆಯಲ್ಲಿ ಮಾತಾಪಿತೃ ವಂದನಾ ಕಾರ್ಯಕ್ರಮ

Doddaballapura: Parent Vandana Program at SJCR School

ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಮೆಳೇಕೋಟೆ ಕ್ರಾಸಿನಲ್ಲಿರುವ ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಗ್ರಾಮೀಣ ಶಾಲೆಯಲ್ಲಿ (SJCR) SSLC ತರಗತಿ ವಿದ್ಯಾರ್ಥಿಗಳಿಗೆ ಮಾತಾ ಪಿತೃ ವಂದನಾ ಹಾಗೂ UKG ವಿದ್ಯಾರ್ಥಿಗಳಿಗೆ ಪದವಿ ಪ್ರದಾನ (Graduation ceremony) ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರದ ಶಾಖಾ ಮಠದ ಕಾರ್ಯದರ್ಶಿ ಶ್ರೀ ಮಂಗಳನಾಥಸ್ವಾಮೀಜಿಯವರು ವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, SSLC ವಿದ್ಯಾರ್ಥಿಗಳಿಗೆ ತಮ್ಮ ಪೋಷಕರ ಬಗ್ಗೆ ಗೌರವ ಬೆಳೆಸಿಕೊಳ್ಳಲು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೇಯ ಸಂಸ್ಕಾರ ಬೆಳೆಸಲು ತಿಳಿಸಿ ಎಲ್ಲರಿಗೂ ಆಶೀರ್ವದಿಸಿದರು.

ನಂತರ SSLC ವಿದ್ಯಾರ್ಥಿಗಳು ತಮ್ಮ ತಂದೆ ತಾಯರಿಗೆ ಪಾದಪೂಜೆ ಮಾಡಿ ಅವರಿಂದ ಆರ್ಶೀವಾದ ಪಡೆಯಲು ಅವಕಾಶಮಾಡಿಕೊಡಲಾಯಿತು.

ಆನಂತರ ULG ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಕೆವಿಕೆ ಮಂಡಳಿ ಸಂಘದ ಸದಸ್ಯ ಅರವಿಂದ, ತೆಂಗು ನಾರು ಮಂಡಳಿ ರಾಜ್ಯಾಧ್ಯಕ್ಷ ವೆಂಕಟೇಶ್‌ಬಾಬು, ಮುಖ್ಯಶಿಕ್ಷಕ ವಿಜಯಕುಮಾರ ಹೆಚ್‌ಎಲ್ ಮತ್ತಿತರರಿದ್ದರು.

Exit mobile version