Site icon Harithalekhani

Doddaballapura: ಮಹಾ ಕುಂಭಮೇಳದಲ್ಲಿ ಡಾ. ವಿಜಯ್ ಕುಮಾರ್ ಪುಣ್ಯಸ್ನಾನ..! ಹೇಳಿದ್ ಏನ್ ಗೊತ್ತಾ..?

In Maha Kumbh Mela, Dr. Vijay Kumar Punyasnana

In Maha Kumbh Mela, Dr. Vijay Kumar Punyasnana

ದೊಡ್ಡಬಳ್ಳಾಪುರ (Doddaballapura): ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (MahaKumbhamela) ದೊಡ್ಡಬಳ್ಳಾಪುರದ ಪ್ರಸಿದ್ಧ ವೈದ್ಯರು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ಕುಮಾರ್ ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಪರಮ ಕೃತಜ್ಞತೆಯಿಂದ, 2025 ರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ನನಗೆ ಈ ದೈವಿಕ ಅವಕಾಶವನ್ನು ಕರುಣಿಸಿದ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಪ್ರಯಾಗ್‌ರಾಜ್‌ನ ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವ ಅವಕಾಶವು ನನ್ನ ಜೀವನದ ಅತೀ ದೊಡ್ಡ ಆಶೀರ್ವಾದವಾಗಿದೆ.

ಈ ಅನುಭವವು ನನ್ನ ಆಧ್ಯಾತ್ಮಿಕ ಯಾತ್ರೆಯಲ್ಲಿ ಒಂದು ಮೈಲಿಗಲ್ಲಾಗಿದ್ದು, ನಾನು ಸದಾಕಾಲ ಈ ಕ್ಷಣವನ್ನು ಸ್ಮರಿಸುತ್ತೇನೆ ಎಂದಿದ್ದಾರೆ.

Exit mobile version