Site icon Harithalekhani

FROM DODDABALAPURA RAILWAY POLICE: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

RAILWAY POLICE: A 45-year-old man died after being hit by a train..!

RAILWAY POLICE: A 45-year-old man died after being hit by a train..!

ದೊಡ್ಡಬಳ್ಳಾಪುರ (Doddaballapura): ದೊಡ್ಡಬಳ್ಳಾಪುರ ನಗರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣದ ಮಧ್ಯೆ ಮುತ್ಸಂದ್ರ ಹತ್ತಿರ ರೈಲ್ವೆ ಹಳಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ.

ಈ ಕುರಿತು ಯಶವಂತಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ UDR.ನಂ. 25/2025 ಕಲಂ 194 BNSS ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು, ವಿಳಾಸ ತಿಳಿದು ಬಂದಿಲ್ಲ.

ಚಹರೆ: 5.5 ಅಡಿ ಎತ್ತರ, ಕಪ್ಪನೆಯ ಮೈ ಬಣ್ಣ ದುಂಡು ಮುಖ, ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ತಲೆ ಕೂದಲು ಇದ್ದು ಸಾಧಾರಣವಾದ ಮೈಕಟ್ಟು ಹೊಂದಿರುತ್ತಾರೆ.

ಬಟ್ಟೆಗಳು: ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಆಕಾಶ್ ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.

ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, 9902193960 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ‌.

Exit mobile version