Site icon Harithalekhani

ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳು: DC ಎ.ಬಿ ಬಸವರಾಜು ಹೇಳಿದ್ ಇದು

Cybercrime cases on the rise: This is what DC AB Basavaraju said

Cybercrime cases on the rise: This is what DC AB Basavaraju said

ಬೆಂ.ಗ್ರಾ.ಜಿಲ್ಲೆ: ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ತನ್ನ ಅಸ್ತ್ರವನ್ನು ಹೆಚ್ಚಿಸುತ್ತಲೇ ಇದೆ ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗದೆ ಜಾಗೃತರಾಗಿರಿ ಎಂದು ಜಿಲ್ಲಾಧಿಕಾರಿ (DC) ಎ.ಬಿ ಬಸವರಾಜು ಅವರು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಇಲಾಖೆಯ ಜಿಲ್ಲಾ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದು ಇಂಟರ್ನೆಟ್‌ ನ ದಿನನಿತ್ಯದ ಬಳಕೆಯಲ್ಲಿ ಅಪರಿಚಿತರು ನಮ್ಮ ಅಪ್ಲಿಕೇಶನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಾರೆ ಮತ್ತು ಬಳಕೆದಾರರ ಹೆಸರು, ಪಾಸ್‌ವರ್ಡ್, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ ಮುಂತಾದ ನಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುತ್ತಾ ಬರುತ್ತಿದ್ದಾರೆ.

ಹಣ ದುಪ್ಪಟ್ಟು ಮಾಡಿಕೊಳ್ಳಬೇಕೆಂಬ ಆಸೆಯಿಂದ ಅನಗತ್ಯ ಲಿಂಕ್ ಕ್ಲಿಕ್ ಮಾಡಿ ಮೋಸದ ಜಾಲಕ್ಕೆ ತುತ್ತಾಗುವುದು ನಿಲ್ಲಬೇಕು, ಸಾರ್ವಜನಿಕ ಸ್ಥಳದಲ್ಲಿ ಸಿಗುವ ಉಚಿತ ವೈ-ಫೈ ಬಳಕೆ ಮಾಡುವುದನ್ನು ತಪ್ಪಿಸಿ.

ವೈಯುಕ್ತಿಕ ಮಾಹಿತಿ ಮತ್ತು ಹಣಕ್ಕಾಗಿ ವಿನಂತಿಸುವ ಅಪರಿಚಿತ ಕರೆಗಳಿಗೆ, ಅಸುರಕ್ಷಿತ ವೆಬ್ಸೈಟ್ ಲಿಂಕ್ ಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ ಎಂದರು.

ಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್ ಅವರು ಮಾತನಾಡಿ, ಸೈಬರ್ ವಂಚಕರು ವಿವಿಧ ರೀತಿಯ ತಂತ್ರಗಳನ್ನು ಬಳಸಿ ಜನರ ನಿದ್ದೆಗೆಡಿಸುತ್ತಿದ್ದಾರೆ, ನಿಮ್ಮಿಂದಲೇ ಒಟಿಪಿ ಪಾಸ್ವರ್ಡ್ ಪಡೆದು ನಿಮಗೆ ವಂಚಿಸುತ್ತಿದ್ದಾರ.

ಒಟಿಪಿ, ಆಧಾರ್ ಸಂಖ್ಯೆ, ಪಾನ್ ಅಥವಾ ಬ್ಯಾಂಕ್ ರುಜುವಾತುಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಅಥವಾ ಯಾರೊಂದಿಗೂ ಬಹಿರಂಗ ಪಡಿಸಬೇಡಿ.

ನಿಮಗೆ ಸೈಬರ್ ವಂಚನೆಯಾದ ಸಂದರ್ಭದಲ್ಲಿ ಸೈಬರ್ ಕ್ರೈಂ ಪೊಲೀಸ್ ನಂಬರ್ 1930 ಕರೆಮಾಡಿ ದೂರು ದಾಖಲಿಸಬಹುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಜಿಲ್ಲಾ ಮಾಹಿತಿ ಅಧಿಕಾರಿ ಗೌರಿಶಂಕರ್, ಕೃಷಿ ಇಲಾಖೆ ಉಪನಿರ್ದೇಶಕಿ ಗಾಯಿತ್ರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ.

ಆಹಾರ ಇಲಾಖೆಯ ಉಪನಿರ್ದೇಶಕರಾದ ಶಂಕರ್ ಮೂರ್ತಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ರಾಜೀವ್ ಸುಲೋಚನಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version