Site icon Harithalekhani

ನೃತ್ಯ ಮಾಡುವಾಗ ಕುಸಿದು ಬಿದ್ದು ಯುವತಿ ಸಾವು..!| Video

ಸಹೋದರಿಯ ವಿವಾಹ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುವಾಗ young woman died after collapsing while dancing..!

young woman died after collapsing while dancing..!

ವಿದಿಶಾ: ಸಹೋದರಿಯ ವಿವಾಹ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುವಾಗ ಹೃದಯಾಘಾತಕ್ಕೆ (heart attack) ಒಳಗಾಗಿ ಕುಸಿದು ಬಿದ್ದ ಯುವತಿ ಸಾವನಪ್ಪಿರುವ ಘಟನೆ ಮಧ್ಯಪ್ರದೇಶ ವಿದಿಶಾದಲ್ಲಿ ಸಂಭವಿಸಿದೆ.

ಸುಮಾರು 25 ವರ್ಷದ ಯುವತಿಯು, ಆಶಾ ಭೋಸ್ಥೆ ಹಾಗೂ ಸೋನು ನಿಗಮ್ ಅವರು ಹಾಡಿರುವ ಶರಾರಾ…ಶರಾರಾ ಎಂಬ ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತವಾಗಿದೆ.

ಈ ವೇಳೆ ವೇದಿಕೆ ಮೇಲೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿದ್ದ ಸಂಬಂಧಿಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

https://www.harithalekhani.com/wp-content/uploads/2025/02/1000991264.mp4

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಕೋವಿಡ್ ವ್ಯಾಕ್ಸಿನ್ ಎಫೆಕ್ಟ್‌ನಿಂದಲೇ ಯುವಕರಿಗೆ ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದು ಕಾಮೆಂಟಿಸಿದ್ದಾರೆ.

Exit mobile version