Site icon Harithalekhani

ವಿಜಯೇಂದ್ರನ ತೆಗೆದುಬಿಡ್ತಾರೆ ಅಂತ ಕೆಲ ನ್ಯೂಸ್ ಚಾನಲ್ ಬಾಸ್‌ಗಳಿಗೆ ಚಿಂತೆಯಾಗಿದೆ; ಯತ್ನಾಳ್ ಲೇವಡಿ

Let the media report responsibly; Yatnal stung again

Let the media report responsibly; Yatnal stung again

ದಾವಣಗೆರೆ: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನ (Vijayendra) ತಗೆದು ಬಿಡ್ತಾರೆ ಎಂಬುದು ಕೆಲ ನ್ಯೂಸ್ ಚಾನಲ್‌ಗಳಿಗೆ ಚಿಂತೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡ್ತಾ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಲೇವಡಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾತಾಡಿದ ಅವರು, ವಿಜಯೇಂದ್ರ (Vijayendra) ಮನೆ ಮುಂದೆ ನೀವು ನಿಲ್ಲಿ ಅವರ ಗುಣಗಾನ ಮಾಡಿ ಎಂದು ಕಿಡಿಕಾರಿದರು.

ಯತ್ನಾಳ್‌ಗೆ ಅಪಮಾನ ಖಚಿತ, ರಾಷ್ಟ್ರೀಯ ನಾಯಕರು ಭೇಟಿಯಾಗಿಲ್ಲ ಎಂದು ಸುದ್ದಿ ಬಿತ್ತರಿಸುತ್ತೀರಿ ಎಂದು ಮಾದ್ಯಮಗಳ ಮೇಲೆ ಸಹ ಆಕ್ರೋಶ ಹೊರಹಾಕಿದರು

ನನಗೆ ಎಷ್ಟು ಅಪಮಾನ ಆಗಿದೆ ಎಂದರೆ ಬೇರೆಯವರು ಯಾರಾದರೂ ನನ್ನ ಜಾಗದಲ್ಲಿ ಇದ್ದದ್ರೆ ನೇಣು ಹಾಕಿಕೊಳ್ಳಬೇಕಿತ್ತು.. ನಾವು ಹಾಕಿಕೊಂಡಿಲ್ಲ. ಮಾಧ್ಯಮಗಳಲ್ಲಿ ವಿಜಯೇಂದ್ರ (Vijayendra) ಪರವಾಗಿ ವರದಿಗಳು ಬರ್ತಾ ಇದೆ. ನಮ್ಮವಿರುದ್ಧ ವರದಿಗಳು ಬರ್ತಾ ಇದೆ.

ವಿಜಯೇಂದ್ರ ಕಡೆಯ ಕೆಲವರು ನ್ಯೂಸ್ ಚಾನಲ್ ನಲ್ಲಿ ಸೇರ್ಕೊಂಡು ಅವನ ಪರವಾಗಿಯೇ ಸುದ್ದಿ ಮಾಡ್ತಾ ಇದ್ದಾರೆ. ಅವರನ್ನ ಗಮನಿಸಿದ್ದಾರೆ. ನಿಮ್ದ್ ನೀವ್ ಹೊಡಿತಾ ಇರಿ, ನಮ್ದ್ ನಾವ್ ಮಾಡ್ತಾ ಇರ್ತೀವಿ ಎಂದರು.

ನಿಮ್ದು ತೋರಿಸುತ್ತೇವಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ, ನಮ್ದು ತೋರಿಸಿದರೆ ಟಿಆರ್ ಪಿ ಬರುತ್ತೆ ಅದುಕ್ಕೆ ತೋರಿಸ್ತೀರಿ.. ನಿನಗೇನ್ ನನ್‌ ಮೇಲೆ ಪ್ರೀತಿ ಇಲ್ಲ‌ ಯಡಿಯೂರಪ್ಪ, ವಿಜಯೇಂದ್ರನ ಮೇಲೆ ನಿಮ್ಮ ಪ್ರೀತಿ.

ಒಂದ್ ಕೆಲಸ ಮಾಡಿ ನೀವ್ ಕೆಲ ಚಾನಲೋರು, ವಿಜಯೇಂದ್ರ ಮನೆ ಮುಂದೆ ಟೆಂಟ್ ಹಾಗ್ ಬಿಡಿ, ಬೆಳಗ್ಗೆ ಎದ್ದ ಕೂಡಲೇ ಜಯ ಜಯ ವಿಜಯೇಂದ್ರ.. ನಿನ್ನ ನಾವು ನಮಗೆ ಅನುಕೂಲವು ಅಂತ ಸುಪ್ರಭಾತದಿಂದ ಶುರುಮಾಡಿ ಎಂದರು.

ಮಾಜಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ಕುರಿತು.. ಹಾದಿ ಬೀದಿಯಲ್ಲಿ ಹಂದಿಗಳು ಹೇಳುತ್ತವೇ ಅಂದರೆ ಅವರಿಗೆ ನಾನೇಕೆ ಉತ್ತರ ನೀಡಲಿ? ಎಂದರು.

ಕುಟುಂಬ ರಾಜಕಾರಣದ ವಿರುದ್ಧ ನಾವು ಇದ್ದೇವೆ. ನಾನು ರಾಜ್ಯಾಧ್ಯಕ್ಷ ಹಾಗೂ ಸಿಎಂ ಆಗುತ್ತೇನೆ. ನಾನು ಕೂಡ ಅರ್ಹನಿದ್ದೇನೆ ಎಂದು ಯತ್ನಾಳ್ ಹೇಳಿದರು.

Exit mobile version