ಬೆಂಗಳೂರು: ಇದೇ ಪ್ರಥಮ ಬಾರಿಗೆ ಆನ್ಲೈನ್ ಮೂಲಕ ನಡೆಸಲಾದ ಯುವ ಕಾಂಗ್ರೆಸ್ ಸಮಿತಿ (Youth Congress Committee) ಚುನಾವಣೆ ಫಲಿತಾಂಶ ಶುಕ್ರವಾರ ರಾತ್ರಿ 07 ಗಂಟೆಗೆ ಪ್ರಕಟವಾಗಿದೆ.
ಇದರನ್ವಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥ್ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಟಿವಿ ಶರತ್ ಪಾಟೀಲ್ ಆಯ್ಕೆಯಾಗಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಮಲ್ಲೋಹಳ್ಳಿ ಪುನೀತ್ ಗೌಡ 6353 ಮತಗಳನ್ನು ಪಡೆದು ಬಾರಿ ಅಂತರದಿಂದ ವಿಜೇತರಾಗಿದ್ದಾರೆ.
ಉಳಿದಂತೆ ನಗರ ಬ್ಲಾಕ್ ಯುವ ಅಧ್ಯಕ್ಷರಾಗಿ ಭರತ್ ಶರ್ಮ, ಗ್ರಾಮಾಂತರ ಬ್ಲಾಕ್ ಯುವ ಅಧ್ಯಕ್ಷರಾಗಿ ರಾಕೇಶ್ ಗೌಡ, ಕಸಬಾ ಬ್ಲಾಕ್ ಯುವ ಅಧ್ಯಕ್ಷರಾಗಿ ಜಯಸಿಂಹ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಯುವಕರು ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.