ಬೆಂಗಳೂರು, Video: ಚಿಲ್ಲರೆ ಅಂಗಡಿಯಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದ ಪುಡಿರೌಡಿಗೆ ಆತಂಕ ಸೃಷ್ಟಿಸಿದ್ದ ಪುಡಿ ರೌಡಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಸಿಗರೇಟ್ ವಿಚಾರವಾಗಿ ಕೋರಮಂಗಲ 80 ಫೀಟ್ ರೋಡ್ ಸೆಕೆಂಡ್ ಸ್ಟೇಜ್ ನ ಅಂಗಡಿಯಲ್ಲಿ ಮಾಲೀಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದ ಪುಡಿರೌಡಿಗೆ ಕೈಗೆ ಸ್ಲೇಟು ಕೊಟ್ಟಿದ್ದಾರೆ.
ಈ ವಿಡಿಯೋವನ್ನು ಸ್ವತಃ ಬೆಂಗಳೂರು ಪೊಲೀಸರ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಹಾಡಹಗಲೇ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ತನಗೆ ಏನು ಬೇಕೋ ಎಲ್ಲಾ ಫ್ರೀಯಾಗಿ ತೆಗೆದುಕೊಂಡು ಹೋಗಿದ್ದ ಲಾಂಗ್ ತೋರಿಸಿ ತಾನು ಕೇಳಿದ್ದನ್ನೆಲ್ಲಾ ಬಿಟ್ಟಿಯಾಗಿ ಕೊಡಬೇಕು ಎಂದು ಆವಾಜ್ ಹಾಕಿದ್ದ.
ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಪೊಲೀಸರು ಕ್ರಮಕೈಗೊಂಡು ಪುಡಿರೌಡಿ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದಾರೆ.