Site icon Harithalekhani

ಪ್ರೀತಿಸಿದ ಮಗಳ ಬಡಿದುಕೊಂದ ತಂದೆ..!

Murder: father who hit the daughter..!

Murder: father who hit the daughter..!

ಔರಾದ್: ಮಗಳು ಪ್ರೀತಿ ಮಾಡಿದ ಕಾರಣ ತಂದೆಯೊಬ್ಬ ಆಕೆಯ ಜೀವವನ್ನೇ ತೆಗೆದಿರುವ (Murder) ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಕೃತ್ಯ ನಡೆದಿದೆ.

18 ವರ್ಷದ ಮೋನಿಕಾ ಮೋತಿರಾಮ ಜಾಧವ್ (18) ಜೀವ ಕಳೆದುಕೊಂಡ ಯುವತಿ ಎಂದು ಗುರುತಿಸಲಾಗಿದ್ದು, ಆಕೆಯ ಮೋತಿರಾಮ ಜಾಧವ್‌ ಹತ್ಯೆ ಆರೋಪಿ.

ತಂದೆಯ ಎದುರು ತನ್ನ ಪ್ರೀತಿ ವಿಷಯವನ್ನು ಮಗಳು ಪ್ರಸ್ತಾಪಿಸಿದ್ದಾಳೆ. ಪ್ರೀತಿಸಿದ ಯುವಕನನ್ನೇ ಮದುವೆ ಆಗುತ್ತೇನೆ ಎಂದಿದ್ದಾಳಂತೆ. ಇದಕ್ಕೆ ಕೆರಳಿದ ಅಪ್ಪ ಮೋತಿರಾಮ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ಅಲ್ಲದೆ ಕಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ.

ಇದರಿಂದ ತೀವ್ರವಾಗಿ ಗಾಯಗೊಂಡ ಮೋನಿಕಾ ಜಾಧವ್ ಸ್ಥಳದಲ್ಲೇ ಉಸಿರು ಬಿಟ್ಟಿದ್ದಾಳೆ.

ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ದೂರು ನೀಡಿದ್ದಾಳೆ.

Exit mobile version