ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಪುತ್ರ, ನವಗ್ರಹ (Navagraha) ಸಿನಿಮಾ ಖ್ಯಾತಿಯ ಗಿರಿ ದಿನೇಶ್ (Giri Dinesh) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.
ದರ್ಶನ್ ನಟನೆಯ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದ 45 ವರ್ಷದ ಗಿರಿ ದಿನೇಶ್‌ಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ತಿಳಿದು ಬಂದಿದೆ.
ಫೆಬ್ರವರಿ 7ರ ಶುಕ್ರವಾರ ಸಂಜೆ ತಮ್ಮ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಕುಟುಂಬಸ್ಥರು ಅವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ, ಮಾರ್ಗ ಮಧ್ಯೆಯೇ ಗಿರಿ ಅವರು ಮೃತಪಟ್ಟಿದ್ದಾರೆ.
ಅವಿವಾಹಿತಾರಾಗಿದ್ದ ಗಿರಿ ಅಣ್ಣನ ಮನೆಯಲ್ಲಿಯೇ ವಾಸವಿದ್ದರು.