ನವದೆಹಲಿ: ಆಮ್ ಆದ್ಮಿ (AAP) ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ.
ನ್ಯೂಡೆಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಹಾಗೂ ಕಾಂಗ್ರೆಸ್ ನ ಸಂದೀಪ್ ದೀಕ್ಷಿತ್ ಸ್ಪರ್ಧೆಯಲ್ಲಿ ಪರ್ವೇಶ್ ವರ್ಮಾ ಬಹುಮತ ಪಡೆಯುತ್ತಾ ಸಾಗಿದ್ದು ತಮ್ಮ ಗೆಲುವನ್ನು ಖಚಿತಪಡಿಸಿದ್ದಾರೆ.
ಮತ್ತೊಂದು ಮಹತ್ವದ ಕ್ಷೇತ್ರವಾದ ಜಂಗ್ ಪುರ ಕ್ಷೇತ್ರದಲ್ಲಿ ಮನೀಸ್ ಸಿಡೋಡಿಯಾ ಸೋಲನ್ನಪ್ಪಿದ್ದು ಎಎಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪರ್ವೇಶ್ ಸಿಂಗ್ ಸಾಹೆಬ್ ಅವರು ಈಗಾಗಲೇ ಗೃಹಸಚಿವ ಅಮಿತ್ ಶಾ ಭೇಟಿಗಾಗಿ ತೆರಳಿದ್ದು ಬಿಜೆಪಿ ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.
ಇದರೊಂದಿಗೆ ಕಳೆದ ಹತ್ತು ವರ್ಷಗಳ ಹಿಂದೆ ಕ್ಲೀನ್ ಇಮೇಜ್ ನೊಂದಿಗೆ ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿದೆ.
ಅಲ್ಲದೆ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ದೆಹಲಿ ವಾಸಿಗಳ ಮನ ಗೆದ್ದಿದೆ. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ.
ಪ್ರಸ್ತುತ ಮಾಹಿತಿ ಅನ್ವಯ AAP 23, BJP 47, Cong 0