ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ಕಾರಣ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ನಂತರ ಇದೇ ಮೊದಲ ಬಾರಿಗೆ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಅಭಿಮಾನಿಗಳಿಗೆ ಸಂದೇಶ ಒಂದನ್ನು ನೀಡಿದ್ದಾರೆ.
ಇದೇ ತಿಂಗಳ 16 ರಂದು ಜನ್ಮದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸೆಲೆಬ್ರಿಟಿಗಳಿಗೆ ದರ್ಶನ್ ಸಂದೇಶ ನೀಡಿದ್ದಾರೆ.
ಈ ವರ್ಷ ಅವರು ಬರ್ತ್ಡೇನ ಆಚರಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ಈ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೊಂದು ವರ್ಷ ಕ್ಷಮಿಸಿಬಿಡಿ. ನಿಮಗೆ ಧನ್ಯವಾದ ಹೇಳಬೇಕು ಎನ್ನುವ ಆಸೆ ನನಗೂ ಇದೆ’ ಎಂದು ಅವರು ಕೋರಿದ್ದಾರೆ.
‘ದಯಮಾಡಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ. ಸೂರಪ್ಪ ಬಾಬು ಅವರಿಗೆ ನಾನು ಹಣವನ್ನು ಮರಳಿ ಕೊಟ್ಟಿದ್ದೇನೆ. ಇಂಡಸ್ಟ್ರಿಯಲ್ಲಿನ ಆಪ್ತರು ನನ್ನ ಬಳಿ ಅವರನ್ನು ಕರೆದುಕೊಂಡು ಬಂದಿದ್ದರು. ಈಗ ಸಮಯವೆಲ್ಲ ವ್ಯರ್ಥವಾಗಿದೆ. ಅವರ ಅಡ್ವಾನ್ಸ್ ಹಣ ಇಟ್ಟುಕೊಂಡರೆ ಅವರ ಕಮಿಟ್ಮೆಂಟ್ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡೋಣ ಎಂದು ಹೇಳಿದ್ದೇನೆ’ ಎಂದಿದ್ದಾರೆ ದರ್ಶನ್.
ಆ ವಿಡಿಯೋ ಇಲ್ಲಿದೆ.