Site icon Harithalekhani

ಫೆ.08: ದಿನ ಭವಿಷ್ಯ: ಈ ರಾಶಿಯವರು ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿದರೆ ಒಳಿತು

Astrology: It is good to be patient

Astrology: It is good to be patient

ಶನಿವಾರ, ಫೆಬ್ರವರಿ 08, 2025, ದೈನಂದಿನ ರಾಶಿ ಭವಿಷ್ಯ.. Astrology

ಮೇಷ: ಹಣದ ವಿಷಯ ಬದಿಗಿಟ್ಟು ಇನ್ನಿತರ ವಿಷಯಗಳ ಕಡೆ ಗಮನಕೊಡಿ, ನಿಮಗೆ ಎಲ್ಲಾ ವಿಷಯ ಗೊತ್ತೆಂಬ ಭ್ರಮೆ ಬೇಡ. ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ.

ವೃಷಭ: ಇಂದು ನಿಮಗೆ ಅತ್ಯುತ್ತಮ ದಿನ, ಯಾವುದೇ ಹಿನ್ನಡೆ ಆಗದಿದ್ದೂ ಅಹಂಕಾರದಿಂದ ಮೆರೆದರೆ ಶಾಸ್ತಿ ಖಚಿತ. ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ.

ಮಿಥುನ: ಏನೂ ಸಾಧಿಸುತ್ತಿಲ್ಲ ಎಂಬ ಭಾವನೆಯನ್ನು ಬಿಟ್ಟು, ನಿಮ್ಮ ಕೈಲಾಗುವ ಪ್ರಯತ್ನ ಮಾಡಿ ಗುರಿಯೆಡೆಗೆ ಸಾಗಲು ನೋಡಿ. ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಾತಾಪಿತರ ಸೇವೆಯಿಂದ ಮನಶಾಂತಿ.

ಕಟಕ: ನಿಮಗೀಗ ಸಂಕಷ್ಟ ಕಾಲ ಮುಗಿಯಿತೆಂದೇ ಭಾವಿಸಿ, ನಿರಾಳತೆಯಿಂದ ಮುಂದಿನ ಕಾರ್ಯಗಳಿಗೆ ಸದಾ ಸಿದ್ದರಾಗಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ, ಪಿತ್ರಾರ್ಜಿತ ಆಸ್ತಿ ವಿವಾದ, ಪ್ರಭಾವಿ ವ್ಯಕ್ತಿಗಳ ಭೇಟಿ.

ಸಿಂಹ: ಅತಿಯಾದ ನಿರೀಕ್ಷೆ ನಿಮ್ಮ ಸಮಸ್ಯೆ ಯಾಗಿರುವುದ ರಿಂದ ಪ್ರಯತ್ನಕ್ಕೆ ತಕ್ಕಂತೆ ಮಾತ್ರ ಫಲ ಸಿಗುವುದು ಎಂಬ ವಿಚಾರ ನೆನಪಿನಲ್ಲಿರಲಿ. ಧನ ನಷ್ಟ, ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹಿತರ ಮಾತಿಗೆ ಗೌರವ.

ಕನ್ಯಾ: ಏಕಾಗ್ರತೆಯಿಂದ ಕಾರ್ಯನಿರ್ವಹಿಸದಿದ್ದರೆ ತಪ್ಪುಗಳಾಗುವ ಸಾಧ್ಯತೆ ಹೆಚ್ಚು, ಹಾಗಾಗಿ ಮನಸ್ಸನ್ನು ಹದ್ದುಬಸ್ತಿನಲ್ಲಿಡಿ. ಸ್ತ್ರೀಯರಿಗೆ ಮನೆಯ ಜವಾಬ್ದಾರಿ, ಮಕ್ಕಳಿಂದ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಮನಶಾಂತಿ.

ತುಲಾ: ನಿಮ್ಮ ಸಂತೋಷ-ದು:ಖ ಆತ್ಮೀಯರ ಜೊತೆ ಹಂಚಿಕೊಂಡರೆ ಉತ್ತಮ, ಇಲ್ಲದಿದ್ದರೆ ನೀವೊಬ್ಬರೇ ಕೊರಗಬೇಕಾದೀತು. ಆದಾಯ ಉತ್ತಮ, ಸಾಲ ವಸೂಲಿ ಸಾಧ್ಯತೆ, ಅನಿರೀಕ್ಷಿತ ಖರ್ಚು, ಪುಣ್ಯಕ್ಷೇತ್ರ ದರ್ಶನ.

ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಅನುಕೂಲ ಪರಿಸ್ಥಿತಿಯನ್ನು ನೀವೇ ಸೃಷ್ಟಿಸಲು ಪ್ರಯತ್ನಿಸಿದರೆ ಈ ಸಕಲ ಉತ್ತಮ ಭವಿಷ್ಯ ನಿಮ್ಮದಾಗಲಿದೆ. ಭಾಗ್ಯ ವೃದ್ಧಿ, ಕೋರ್ಟ್ ಕೆಲಸಗಳಲ್ಲಿ ಅಡತಡೆ, ಶತ್ರು ನಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ಅಧಿಕಾರ-ಪ್ರಾಪ್ತಿ.

ಧನಸ್ಸು: ಸಮಸ್ಯೆಯೊಂದು ಪರಿಹಾರ ಕಾಣುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಗಮನಿಸಿ. ಸ್ವಂತ ಉದ್ಯಮಿಗಳಿಗೆ ಲಾಭ, ಸ್ತ್ರೀ ಲಾಭ,ಸ್ನೇಹಿತರ ಭೇಟಿ, ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.

ಮಕರ: ನಿಮ್ಮ ಆತ್ಮವಿಶ್ವಾಸವೇ ನಿಮಗೆ ಆನೆಬಲ, ಹಾಗಾಗಿ ಬಂಧುಗಳ ಸಹಕಾರ ದೊರೆಯಲಿದ್ದು ಉತ್ತಮ ಕಾರ್ಯದಲ್ಲಿ ನಿರತರಾಗಿ. ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ, ಹಿತ ಶತ್ರು ಭಾದೆ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.

ಕುಂಭ: ವೃತ್ತಿ ಬದುಕಿನಲ್ಲಿ ಯಶಸ್ಸು ನಿಮ್ಮದಾಗಲಿದೆ, ಮಿತವ್ಯಯದಿಂದ ಇನ್ನು ಕೆಲವು ತಿಂಗಳ ಕಾಲ ನೀವು ಸಾಧಿಸುವುದು ಬಹಳಷ್ಟಿದೆ. ವಾಹನ ಖರೀದಿ, ವಿನಾಕಾರಣ ದ್ವೇಷ, ಕೆಲಸಗಳನ್ನು ಮನಪೂರ್ವಕವಾಗಿ ಮಾಡುವಿರಿ.

ಮೀನ: ಆತ್ಮೀಯರ ಬೆಂಬಲ ನಿಮ್ಮ ಕಾರ್ಯಕ್ಕೆ ಸಿಗಲಿದೆ, ಆರೋಗ್ಯ ಏರುಪೇರಾಗದಂತೆ ನೋಡಿಕೊಂಡರೆ ಏನೂ ಚಿಂತೆಯಾಗದು. ಕುಟುಂಬ ಸೌಖ್ಯ, ಕಾರ್ಯ ವಿಘಾತ, ಋಣಭಾದೆ,ಅಧಿಕ ಖರ್ಚು, ವಿವಾಹ ಯೋಗ, ಮನೆಯಲ್ಲಿ ಶುಭ ಸಮಾರಂಭ.

ರಾಹುಕಾಲ: 09:42 ರಿಂದ 11:10
ಗುಳಿಕಕಾಲ: 06:46 ರಿಂದ 08:14
ಯಮಗಂಡಕಾಲ: 02:06 ರಿಂದ 03:34

Exit mobile version