ಬೆಂ.ಗ್ರಾ.ಜಿಲ್ಲೆ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜರುಗಿಸಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ (Voluntary organization) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ವಯಂ ಸೇವಾ ಸಂಘ ಸಂಸ್ಥೆಯು ನೊಂದಾಯಿತ ಸಂಸ್ಥೆಯಾಗಿದ್ದು ನೊಂದಣಿ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು ಹಾಗೇ ಪ್ರತೀ ವರ್ಷ ಆಡಿಟ್ ಮಾಡಿಸಿರಬೇಕು, ಜೊತೆಗೆ 3 ವರ್ಷದ ಲೆಕ್ಕ ಪರಿಶೋಧನಾ ವರದಿ ದೃಡೀಕರಣ ಪತ್ರ ಸಲ್ಲಿಸಬೇಕು.
ಮುಖ್ಯವಾಗಿ ಈ ಸಂಸ್ಥೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅಭಿೃದ್ಧಿಗಾಗಿ 5 ವರ್ಷ ಸೇವೆ ಸಲ್ಲಿಸಿರುವ ದಾಖಲೆಯನ್ನು ಇಲಾಖೆಗೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸುವುದಕ್ಕೆ ಫೆಬ್ರವರಿ 14 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ನಂ 217, 2ನೇ ಮಹಡಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ -562110.
ಸಹಾಯಕ ನಿರ್ದೇಶಕರ ಕಛೇರಿ, ದೇವನಹಳ್ಳಿ ತಾಲ್ಲೂಕು ದೂ ಸ : 27681784.
ದೊಡ್ಡಬಳ್ಳಾಪುರ ತಾಲ್ಲೂಕು ದೂ ಸಂ :27623681.
ಹೊಸಕೋಟೆ ತಾಲ್ಲೂಕು ದೂ ಸಂ: 27931528.
ನೆಲಮಂಗಲ ತಾಲ್ಲೂಕು ದೂ ಸಂ: 27723172 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.