ಚೆನ್ನೈ: ಪತಿ ತನಗಾಗಿ ಕೊಡಿಸಿದ ಮನೆಯನ್ನ ಮಾರಿ ಪ್ರಿಯಕರೊಂದಿಗೆ ಓಡಿ ಹೋಗಿರುವ ಪತ್ನಿಯ ಮನಸ್ಥಿತಿಗೆ ಬೇಸತ್ತು, ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಮೃತನನ್ನು ಕನ್ಯಾಕುಮಾರಿ ಜಿಲ್ಲೆಯ ವಿಲ್ಲುಕುರಿಯ ನಿವಾಸಿ 47 ವರ್ಷದ ಬೆಂಜಮಿನ್ ಎಂದು ಗುರುತಿಸಿದರೆ, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿಯನ್ನು ಸುನೀತಾ ಎನ್ನಲಾಗಿದೆ.
ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ.
ಇದರಿಂದ ತೀವ್ರವಾಗಿ ನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ತಮಿಳುನಾಡಿನಲ್ಲಿ ವಾಸಿಸುವ ಪತ್ನಿ ಸುನೀತಾಗೆ ಹಣ ಕಳುಹಿಸುತ್ತಿದ್ದನಂತೆ.
ಆದರೆ ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದ ಸುನೀತಾಗೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿ, ಪ್ರಿಯಕರನ ಜೊತೆ ಓಡಿ ಹೋಗಲು ಯೋಜನೆ ಹಾಕಿದ್ದಾಳೆ.
ಬೆಂಜಮಿನ್ ದಕ್ಷಿಣ ಮಣಕ್ಕವಿಲೈನಲ್ಲಿ ತನ್ನ ಹೆಂಡತಿಯ ಹೆಸರಿನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾನೆ. ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಜಗಳ ನಡೆದಿದ್ದು, ಅಂದಿನಿಂದ ಅವಳು ಬೆಂಜಮಿನ್ಗೆ ಕರೆ ಮಾಡುವುದನ್ನು ನಿಲ್ಲಿಸಿದಳು. ಇದರಿಂದ ಬೆಂಜಮಿನ್ಗೆ ಅವಳ ಯಾವುದೇ ವಿವರಗಳು ತಿಳಿದಿರಲಿಲ್ಲ.
ಇದರ ನಡುವೆ ಭಾರತಕ್ಕೆ ಬಂದಿದ್ದ ಬೆಂಜಮಿನ್ ಗೆ ಶಾಕ್ ಆಗಿದೆ. ಸುನೀತಾ ತಾನು ಖರೀದಿಸಿದ ಮನೆಯನ್ನು ಮಾರಿದ್ದಾಳೆಂದು ತಿಳಿದು ಅವನಿಗೆ ಆಘಾತವಾಗಿದೆ.
ಅಲ್ಲದೆ ತಿರುವನಂತಪುರದ ಸೈಜು ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ತಿಳಿದ ಮೇಲೆ ನೊಂದಿದ್ದ ತನ್ನ ಪತ್ನಿಯ ವಂಚನೆಯ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಪತ್ನಿಯ ದ್ರೋಹದಿಂದ ತೀವ್ರ ನೊಂದ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.