Site icon ಹರಿತಲೇಖನಿ

BJP ತಟಸ್ಥ ಬಣದ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ..!

Vijayendra against BJP neutral faction..!

Vijayendra against BJP neutral faction..!

ಬೆಂಗಳೂರು: ರಾಜ್ಯ ಬಿಜೆಪಿ (BJP) ಬಣಬಡಿದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.. ಕೇಂದ್ರದ ವರಿಷ್ಟರು ಇವರುಗಳ ಬಾಯಿಗೆ ಬೀಗ ಹಾಕುವ ಲಕ್ಷಣ ಕಾಣುತ್ತಿಲ್ಲ.

ಇಂದು ಬೆಳಗ್ಗೆ ಬಣಬಡಿದಾಟ ಕುರಿತು ಸಂಸದ ಬಸವರಾಜ ಬೊಮ್ಮಾಯಿ (Basavaraj bommai) ಬೇಸರದ ಕುರಿತು, ಕಿಡಿಕಾರಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ತಟಸ್ಥ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಟಸ್ಥ ಬಣದ ಬಗ್ಗೆಯೂ ಗೊತ್ತು, ಪಕ್ಷಕ್ಕೆ ದುಡಿದ ಯಡಿಯೂರಪ್ಪ ಅವರನ್ನು ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ.

ತಟಸ್ಥ ಎಂದು ಹೇಳಿಕೊಳ್ಳುವವರು ಮತ್ತು ಪಕ್ಷ ಬೆಳವಣಿಗೆ ಬೇಸರ ತಂದಿದೆ ಎಂದು ಹೇಳುವವರು ಯಾಕೆ ಸುಮ್ಮನಿದ್ದಾರೆ? ಮಧ್ಯಸ್ಥಿಕೆ ಯಾಕೆ ವಹಿಸುತ್ತಿಲ್ಲ? ಎಂದು ತೀಕ್ಷ್ಣವಾಗಿ ಉತ್ತರಿಸಿದರು.

ಇವೆಲ್ಲ ಸರಿಪಡಿಸಲು ಪಕ್ಷದ ರಾಷ್ಟ್ರೀಯ ನಾಯಕರೇ ಬರಬೇಕಾ, ಇವರಿಗೆ ಜವಾಬ್ದಾರಿ ಇಲ್ಲವಾ? ಅಡ್ರೆಸ್ ಗೆ ಇಲ್ಲದವರೂ ಯಡಿಯೂರಪ್ಪ ಅವರಿಂದಲೇ ಮೇಲೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಬಿ.ಎಸ್. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಹಲವರಿಗೆ ರಾಜಕೀಯ ಜನ್ಮ ನೀಡಿದ್ದಾರೆ. ಅದರಲ್ಲೂ ಝೀರೋ ಆಗಿದ್ದವರಿಗೆ ಕೂಡ ಇಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ನೀಡಿದ್ದೇ ಬಿಎಸ್‌ವೈ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕರ್ನಾಟಕ ಘಟಕಕ್ಕೆ ಅಧ್ಯಕ್ಷರ ಆಯ್ಕೆ ಸಂಬಂಧ ನಡೆಯಲಿರುವ ಚುನಾವಣೆ ಬಗ್ಗೆ ಕೂಡ ಮಾತನಾಡಿ, ಫೆಬ್ರವರಿ 20ರ ಒಳಗಾಗಿ ಎಲ್ಲಾ ಫೈನಲ್ ಆಗಲಿದೆ. ಫೆಬ್ರವರಿ 20ರ ಒಳಗೆ ಚುನಾವಣೆ ನಡೆಯಲಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಮುಗಿಯಲಿದೆ.

ರಾಜ್ಯಾಧ್ಯಕ್ಷನಾಗಿ ನನಗೆ ಅನುಭವ ಇಲ್ಲದ ಇರಬಹುದು, ಆದರೆ ನಾನೂ ಪಕ್ಷದಲ್ಲಿ ಕಾರ್ಯಕರ್ತನಾಗಿ, ವಿವಿಧ ಹುದ್ದೆಗಳಲ್ಲಿ 18 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದೇನೆ.

ನಾನೇನು ಹೊಸಬನಲ್ಲ. ಲಕ್ಷಾಂತರ ಕಾರ್ಯಕರ್ತರಿಗೆ ನಾನು ಏನು ಎಂಬುದು ಗೊತ್ತು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದರು.

Exit mobile version