ದೇವನಹಳ್ಳಿ: ತಾಲೂಕಿನ ಹ್ಯಾಡಳ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (nikhil kumaraswamy) ಪಾಲ್ಗೊಂಡರು.
ಗ್ರಾಮದ ಎಲ್ಲಾ ತಾಯಂದಿರು, ಅಕ್ಕ ತಂಗಿಯರು ಕಳಸ ಹೊತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಅದ್ದೂಯಾಗಿ ಸ್ವಾಗತಿಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ಇವೆಲ್ಲದಕ್ಕೂ ಅತೀ ಶೀಘ್ರದಲ್ಲಿ ಬಿಜೆಪಿ ರಾಷ್ಟ್ರೀಯ ಕೇಂದ್ರದ ನಾಯಕರುಗಳು ಬಗೆಹರಿಸುತ್ತಾರೆ.
ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ ಡಿಕೆ ಶಿವಕುಮಾರ್ ಆರೋಪಕಕ್ಕೆ ಮಾತನಾಡಿ, ಈ ಹಿಂದೆ ಕಳೆದ ವಿಧಾನ ಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಮೇಕೆದಾಟು ಯೋಜನೆಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ ಎಂದು ಹೇಳಿದ್ರು, ಈಗ ಡಿಕೆ ಶಿವಕುಮಾರ್ ಅವರಿಗೂ ಅಷ್ಟೇ ಜವಾಬ್ದಾರಿ ಇದೆ.
ಮುಂದಿನ ದಿನಗಳಲ್ಲಿ ನೀರಾವರಿಗೆ ಸಂಬಂಧಪಟ್ಟಂತ ಯಾವುದೇ ವಿಚಾರ ಇರಬಹುದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹದಿನೈದರಿಂದ ಇಪತ್ತು ಸಾವಿರ ಕೋಟಿಯಷ್ಟು ನೀರಾವರಿಗೆ ವಿಶೇಷವಾಗಿ ಕರ್ನಾಟಕಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ರು. ಆಗಾಗಿ ಸದಾ ಕಾಲ ನೆಲ ಜಲ ಭಾಷೆ ವಿಚಾರವಾಗಿ ಜಾತ್ಯತೀತ ಜನತಾದಳ ಪಕ್ಷ ಯಾವಗಲು ಇರುತ್ತೆ ಎಂದು ತಿಳಿಸಿದರು.