ಟೈಗರ್ ವ್ಯಾಲಿ: ಆನೆ (elephant) ದಾಳಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನ್ ಪ್ರಜೆ ಸಾವನಪ್ಪಿರುವ ಘಟನೆ ತಮಿಳುನಾಡಿನ ವಾಲ್‌ರೈನ ಎಟಿಆರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಭವಿಸಿದೆ.
ಟೈಗರ್ ವ್ಯಾಲಿ ರಸ್ತೆಯಲ್ಲಿ 77 ವರ್ಷದ ಮೈಕಲ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಾದ ಒಂಟಿ ಸಲಗ (elephant) ಬೈಕ್ ಸಮೇತ ಮೈಕಲ್‌ನನ್ನು ಎತ್ತೆಸೆದಿದೆ.
ಇತರೆ ಪ್ರಯಾಣಿಕರ ಎಚ್ಚರಿಕೆಯ ಹೊರತಾಗಿಯೂ ಜುರ್ಸೆನ್ ರಸ್ತೆ ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.
ಕಾಡಿಂದ ಧಾವಿಸಿ ಬಂದ ಆನೆ ರಸ್ತೆ ಅಡ್ಡಗಟ್ಟಿದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನಿಂತಿದ್ದವು. ಆದಾಗ್ಯೂ, ಜುರ್ಸೆನ್ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದೆ ಸಾಗಿದರು.
ಅವನು ಸಮೀಪಿಸುತ್ತಿದ್ದಂತೆ, ಆನೆಯು ತನ್ನ ಸೊಂಡಿಲು ಮತ್ತು ದಂತಗಳನ್ನು ಬಳಸಿ ಜುರ್ಸೆನ್ ಮತ್ತು ಅವನ ಮೋಟಾರು ಬೈಕನ್ನು ರಸ್ತೆಯಿಂದ ಎಸೆದಿದೆ. ಘಟನೆಯಲ್ಲಿ ಅವರ ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಜುರ್ಸೆನ್ ಅವರನ್ನು ಆರಂಭದಲ್ಲಿ ವಾಟರ್‌ಫಾಲ್ಸ್ ಎಸ್ಟೇಟ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಪೋಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಜುರ್ಸೆನ್ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ದಾಳಿಗೊಳಗಾದ ಕ್ಷಣವನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ ಈ ಪ್ರದೇಶದಲ್ಲಿನ ಮಾನವ-ವನ್ಯಜೀವಿಗಳ ಮುಖಾಮುಖಿಯ ಅಪಾಯಗಳನ್ನು ಎತ್ತಿ ತೋರಿಸುವ ವೀಡಿಯೋ ವೈರಲ್ ಆಗಿದೆ.