ಹರಿತಲೇಖನಿ

ವಿಜೃಂಭಣೆಯ ಹುಲುಕುಡಿ ವೀರಭದ್ರಸ್ವಾಮಿ ಮಹಾ ರಥೋತ್ಸವ

Exuberant Hulukudi Veerabhadraswamy Maha Rathotsava

Hukukudi trust

ದೊಡ್ಡಬಳ್ಳಾಪುರ (Doddaballapura); ತಾಲೂಕಿನ ಪ್ರಸಿದ್ದ ಹುಲುಕುಡಿ (Hulukudi) ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ 44ನೇ ವಾರ್ಷಿಕ ಮಹಾ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

Aravind, BLN Swamy, Lingapura

ರಥೋತ್ಸವದಲ್ಲಿ ವಿವಿದೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.

ರಥೋತ್ಸವದಲ್ಲಿ ಭಾಗವಹಿಸಿದ್ದ ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತಗಳು ಮೆರುಗು ನೀಡಿದವು.

Aravind, BLN Swamy, Lingapura

ರಥೋತ್ಸವದ ಅಂಗವಾಗಿ ರುದ್ರಾಭಿಷೇಕ, ದೇವಾಲಯದಲ್ಲಿ ರಥಾಂಗ ಹೋಮ ಹಾಗೂ ವಿಶೇಷ ಪೂಜಾ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು.

ದೊಡ್ಡಗುಣಿ ರಂಭಾಪುರಿ ಶಾಖಾ ಮಠದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್‍ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನೆ ನೀಡಿದರು.

ರಥೋತ್ಸವದ ಅಂಗವಾಗಿ ನಿಕಟ ಪೂರ್ವ ಶಾಸಕ ಟಿ.ವೆಂಕಟರಮಣಯ್ಯ ಅವರಿಂದ ಅನ್ನಸಂತರ್ಪಣೆ, ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಅವರಿಂದ ನೀರಿನ ಪೂರೈಕೆ, ಬಮೂಲ್ ನಿರ್ದೇಶಕ ಬಿಸಿ ಆನಂದ್ ಅವರಿಂದ ಮಜ್ಜಿಗೆ-ಪಾನಕ ವಿತರಣೆ ಮಾಡಿದರು.

ರಥೋತ್ಸವದ ಅಂಗವಾಗಿ ಮಂಗಳವಾರ ರಥಾಂಗ ಹೋಮ, ಸಂಜೆ ಅಗ್ನಿ ಕುಂಡ ಪೂಜೆ, ಕಳಸ ಪೂಜೆ, ಉಯ್ಯಾಲೋತ್ಸವ, ಮತ್ತು ವೀರಗಾಸೆ ಕುಣಿತದೊಂದಿಗೆ ಅಗ್ನಿಕುಂಡ ಹಾಯುವುದು, ಅಕ್ಕಿಪೂಜೆ ಪ್ರಸನ್ನ ಭದ್ರಕಾಳಮ್ಮ ವೀರಭದ್ರಸ್ವಾಮಿ ಕಲ್ಯಾಣೋತ್ಸವ ಹಾಗೂ ದೀಪಾರಾಧನೆ ಕಾರ್‍ಯಕ್ರಮಗಳು ನಡೆದವು.

Exit mobile version