ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಉಜ್ಜನಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ತಾಲೂಕು ಮಟ್ಟದ ಹೈನು ರಾಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರ ತಳಿಗಳಿ ಕರುಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಶಸ್ತಿ ವಿತರಿಸಿದ ಬಮೂಲ್ ನಿರ್ದೇಶಕ ಬಿಸಿ ಆನಂದ್‌ಕುಮಾರ್ ಮಾತನಾಡಿ, ಈ ಸ್ಪರ್ಧೆ ಆಯೋಜನೆಗೆ ಕಾರಣ ಏನೆಂಬುದನ್ನು ರೈತರು ಮನಗಾಣಬೇಕಿದೆ.
ಉತ್ತಮ ಗುಣ ಮಟ್ಟದ ರಾಸುಗಳ ಸಾಕುವಿಕೆಯ ಮಹತ್ವ, ಕರುವಿನ ಪಾಲನೆ ಪೋಷಣೆ, ಅಧಿಕ ಹಾಲು ಕರೆಯಲು ಕಾರಣ ಮುಂತಾದ ವಿಚಾರಗಳನ್ನು ರೈತರು ಅರಿತಾಗ ಆರ್ಥಿಕವಾಗಿ ಅನುಕೂಲಕವಾಗಲಿದೆ ಎಂದರು.
ಇದೇ ವೇಳೆ ಸಹಕಾರ ಕ್ಷೇತ್ರದಲ್ಲಿ ಶುಧ್ಧ ಹಸ್ತದವರು ಅಧಿಕಾರಕ್ಕೆ ಬಂದಾಗ ಸಹಕಾರ ಕ್ಷೇತ್ರ ಅಭಿವೃದ್ಧಿಯಾಗಲು, ರೈತರಿಗೆ ನೆರವು ದೊರಕಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, ಅತಿಹೆಚ್ಚು ಹಾಲು ಕರೆದ ರೈತರಾದ ಸೊಣ್ಣಪ್ಪನಹಳ್ಳಿ ಸೋಮಶೇಖರ್ ಅವರಿಗೆ ಮೊದಲ ಬಹುಮಾನ, ಆಚಾರ್ಲಹಳ್ಳಿ ಹೇಮಂತ್ ಅವರಿಗೆ ದ್ವಿತೀಯ ಬಹುಮಾನ ಹಾಗೂ ತೃತಿಯ ಬಹುಮಾನವನ್ನು ಜಮುನಾ ನವೀನ್ ಚಂದ್ರ ಅವರಿಗೆ ನೀಡಲಾಯಿತು.
78 ಮಿಶ್ರ ತಳಿಗಳಿ ಕರುಗಳು ಪ್ರದರ್ಶನದಲ್ಲಿ ಇದ್ದವು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್, ಎಂಪಿಸಿಎಸ್ ಅಧ್ಯಕ್ಷ ಈಶ್ವರಪ್ಪ, ಉಪಾಧ್ಯಕ್ಷ ಪ್ರಕಾಶ್, ಗ್ರಾಪಂ ಅಧ್ಯಕ್ಷ ನಾಗರತ್ನಮ್ಮ ಲಕ್ಷ್ಮೀನಾರಾಯಣಪ್ಪ, ಸದಸ್ಯ ವೀರಭದ್ರ, ಮುಖಂಡರಾದ ತಿಮ್ಮೆಗೌಡ, ಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.