ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿನ (BJP) ಬಣಬಡಿದಾಟ ದೆಹಲಿಗೆ ಹಂತಕ್ಕೆ ತಲುಪಿದರು, ರಾಜ್ಯದಲ್ಲಿ ಪರ ವಿರೋಧವಾಗಿ ಮುಖಂಡರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ (Vijayendra) ಅವರನ್ನು ಕೆಳಗಿಳಿಸುವ ಸಲುವಾಗಿ ಸಮರ ಸಾರಿರುವ ರೆಬೆಲ್ ನಾಯಕರು ದೆಹಲಿ (Delhi) ಯಾತ್ರೆ ಕೈಗೊಂಡಿದ್ದಾರೆ.
ಇತ್ತ ವಿಜಯೇಂದ್ರ ಬಣ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ನೇತೃತ್ವದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದ್ದು, ನಂತರ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Yatnal) ಬಣದ ಕುರಿತು ಹಿಗ್ಗಾಮುಗ್ಗಾ ಬೈಯ್ದಿದ್ದಾರೆ.
ಸನ್ಮಾನ್ಯ ಯತ್ನಾಳ್ ಅವರೇ, ನೀವು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿದ್ದೀರಿ. ಅಪ್ಪು ಪಟ್ಟಣ್ ಶೆಟ್ಟಿಗೆ ಟಿಕೆಟ್ ಕೊಟ್ಟಿದ್ರೆ ನೀನು ಎಂಎಲ್ಎ ಆಗ್ತಿರಲಿಲ್ಲ.. ಎಂಬಿ ಪಾಟೀಲ್ ಹಾಗೂ ಯತ್ನಳ್ ನಡುವೆ ಒಳ ಒಪ್ಪಂದವಿದೆ.
ಈ ಹಿಂದೆ ಪಕ್ಷದಿಂದ ಸಸ್ಪೆಂಡ್ ಆಗಿ ಯಡಿಯೂರಪ್ಪ ನವರ ಕಾಲು ಹಿಡಿದವರು? ಮಿಸ್ಟರ್ ಯತ್ನಾಳ್ ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು, ನಿಮಗೆ ಗೌರವ ಕೊಡ್ತೇವೆ ನಾವು.
ಇವರು ಯಾರು ಮೂಲ ಬಿಜೆಪಿಯಲ್ಲ. ಬಿಜೆಪಿಗೆ ಮೂಲ ಇವರೆಲ್ಲ. ಬಸ್ಸಲ್ಲಿ ಟಿಕೆಟ್ ಹರಿದ್ದಿದ್ದು ಹೇಳಬೇಕಾ..? ಸಿದ್ದೇಶ್ವರ್ ಸಂಸ್ಥೆ ನೀನು ಕಟ್ಟಿದ್ದಲ್ಲ. ಅಲ್ಲಿ ಬಂದು ಸಂಸ್ಥೆ ಕಬ್ಜ್ ಮಾಡಿದಿಯಲ್ಲ. ಅಲ್ಲಿ ನಿಮ್ಮ ಮಗನ್ನ ಪ್ರಚಾರ ಮಾಡ್ತಾ ಇದ್ದಿಯಲ್ಲ ಇದು ಕುಟುಂಬ ರಾಜಕಾರಣ ಅಲ್ವಾ?
ಮಿಸ್ಟರ್ ಕುಮಾರ್ ಬಂಗಾರಪ್ಪ
ಮಿಸ್ಟರ್ ಕುಮಾರ್ ಬಂಗಾರಪ್ಪ (Kumar Bangarappa), ನಿಮ್ಮ ತಂದೆ ಬಂಗಾರಪ್ಪನವರು ಬಿಜೆಪಿಗೆ ಬಂದಾಗ ನೀನು ಬಿಜೆಪಿಗೆ ಬಂದಿರಲಿಲ್ಲ. ಬಿಜೆಪಿಯ ಸೊರಬಾ ಕಾರ್ಯಕ್ರಮಕ್ಕೆ ನೀನು ಬಂದಿಲ್ಲ.
ಮೂಲ ಬಿಜೆಪಿಯವರನ್ನ ನೀನು ಮರೆತಿದ್ದಕ್ಕೆ ನೀನು ಸೋಲಬೇಕಾಯ್ತು. 2023ಚುನಾವಣೆ ಬಳಿಕ ಕ್ಷೇತ್ರ ಮರೆತಿದ್ದಾರೆ. ಸೋತಮೇಲೆ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದ್ರು. ಸಹೋದರ ಮಧು ಸೇರಿಸಿಕೊಳ್ಳಬಾರದೆಂದು ಅಡ್ಡಗಾಲಾದ್ರು.
ಈಗ ನ್ಯಾಷನಲ್ ಲೀಡರ್ ಆಗ್ಬೇಕು ಎಂದು ಕೊಂಡಿದ್ದೀಯಾ? ಬಿಜೆಪಿ ಯಾವ ಹೋರಾಟಕ್ಕೂ ನೀನು ಬಂದಿಲ್ಲ, ಕಾಂಗ್ರೆಸ್ ವಿರುದ್ಧ ನಿಮ್ಮ ಹೋರಾಟ ಇರಬೇಕಿತ್ತು. ಮಿಸ್ಟರ್ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರಲು ಯತ್ನಿಸಿರಲಿಲ್ವಾ?
ಮೂರ್ ನಾಲ್ಕು ದಿನದಿಂದ ದೆಹಲಿಯಲ್ಲಿ ಇದ್ದಾರೆ ವರಿಷ್ಠರ ಭೇಟಿ ಆಯ್ತಾ...? ಕಾಮಿಡಿ ಪೀಸ್ ಆಗಿದ್ದಾರೆ. ಮಾಧ್ಯಮದಲ್ಲಿ ಸ್ಟೋರಿನ ಪ್ಲಾಂಟ್ ಮಾಡಿಸ್ತಾರೆ, ನಡ್ಡಾ ಭೇಟಿ ಯಾದೆವು, ಆದ್ರೆ ಅವರು ಯಾವುದೇ ಫೋಟೋ ಬೇಡ ಎಂದರು ಎನ್ನುತ್ತಾರೆ. ಅವರು ಯಾರನ್ನೂ ಭೇಟಿಯೇ ಆಗಿಲ್ಲ ಎಂದರು. ಈ ಆಟಗಳನ್ನು ಬಿಡಲಿಲ್ಲ ಅಂದರೆ ಈ ರಾಜ್ಯದ ಜನ ದಂಗೆ ಎದ್ದೇಳುತ್ತಾರೆ.
ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದೆ ಅದರ ಬಗ್ಗೆ ಹೋರಾಟ ಮಾಡುವುದು ಬಿಟ್ಟು ಣ ಪಕ್ಷ ಸಂಘಟನೆ ಮಾಡ್ತಾ ಇರುವ ವಿಜಯೇಂದ್ರನ ಕೆಳಗಿಳಿಸಲು ಬಾಯಿಗೆ ಬಂದಂತೆ ಮಾತಾಡ್ತಾರೆ.
ಇಂದು ತುರ್ತಾಗಿ ಸೇರಿದ್ದೇವೆ, ನಾವು ಸೈಲೆಂಟ್ ಆಗಿದ್ದೇವು. ಯಡಿಯೂರಪ್ಪ ವಿಜಯೇಂದ್ರ ಮಾತಾಡಬಾರದು, ಪಕ್ಷ ಸಂಘಟನೆ ಮಾಡಬೇಕು ಎಂದಿದ್ದಾರೆ.
ಆದರೆ ನಾವು ತುರ್ತಾಗಿ ನಾವು 12 ಜನ ಸೇರಿದ್ದೇವೆ. ಮುಂದಿನ ಬುಧವಾರ 100ಕ್ಕು ಹೆಚ್ಚು ಮಂದಿ ಸಭೆ ಸೇರುತ್ತೇವೆ.. ಬಿಜೆಪಿಯಿಂದ ಇವರನ್ನು ಉಚ್ಛಾಟನೆ ಮಾಡಬೇಕಿದೆ.
ಬಿಜೆಪಿ ಅಧಿಕಾರಕ್ಕೆ ತರುವ ಶಕ್ತಿ ಇರುವುದು ವಿಜಯೇಂದ್ರಗೆ ಮಾತ್ರ ಎಂಬುದು ವರಿಷ್ಠರ ತೀರ್ಮಾನ, ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದು ಒಂದೇ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾಗುವುದು ಒಂದೇ.
ಮುಂದಿನ ಬುಧವಾರ ಸಭೆ ನಡೆಸಿ ದೆಹಲಿ ತೆರಳುತ್ತೇವೆ. ನಾಯಕರ ಗಮನಕ್ಕೆ ತರುತ್ತೇವೆ.. ಇವರಂತೆ ಹಾವ್ ಬಿಡುತ್ತೇವೆ ಹಾವ್ ಬಿಡುತ್ತೇವೆ ಎಂಬುದಿಲ್ಲ.. ಇವರದು ದಂಡ ಯಾತ್ರೆ ದಂಡ ಪಿಂಡಗಳ ದಂಡಯಾತ್ರೆ, ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ರೇಣುಕಾಚಾರ್ಯ ಬೈಯ್ದರು.