ಹರಿತಲೇಖನಿ

Doddaballapura: ಸರ್ಕಾರಿ ಶಾಲೆಗೆ CSR ಅನುದಾನದಲ್ಲಿ ಸುಸಜ್ಜಿತ ಶೌಚಾಲಯ..!

Equipped toilet for Govt school under CSR grant

Hukukudi trust

ದೊಡ್ಡಬಳ್ಳಾಪುರ (Doddaballapura): ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆ, ಕೈಗಾರಿಕೆಗಳ CSR ಅನುದಾನ ವರದಾನವಾಗಿದ್ದು, ಮಕ್ಕಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗಿದೆ.

Aravind, BLN Swamy, Lingapura

ಇದಕ್ಕೇ ಪೂರಕ ಎಂಬಂತೆ ಎಜಾಕ್ಸ್ ಸಂಸ್ಥೆ ತಾಲೂಕಿನ ಬಾಶೆಟ್ಟಿಹಳ್ಳಿ, ಆರೂಢಿಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಂತೆ ಮಾದರಿ ಶಾಲೆಗಳನ್ನಾಗಿ ರೂಪಿಸುತ್ತಿದೆ.

ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರದ ಕೆನೆರಾ ಬ್ಯಾಂಕ್ ಕೆನ್ ಫಿನ್ ಹೋಂ ಲಿಮಿಟೆಡ್ ವತಿಯಿಂದ ತಾಲೂಕಿನ ಗಂಡರಾಜಪುರ ಸರ್ಕಾರಿ ಶಾಲೆಗೆ ಸುಮಾರು 7ಲಕ್ಷದ 20 ಸಾವಿರ ರೂ ಮೌಲ್ಯದ ಶೌಚಾಲಯ ನಿರ್ಮಿಸಲಾಗಿದೆ.

Aravind, BLN Swamy, Lingapura

ನಿನ್ನೆ ಶೌಚಾಲಯದ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಕೆನೆರಾ ಬ್ಯಾಂಕ್ ಕೆನ್ ಫಿನ್ ಹೋಂ ಲಿಮಿಟೆಡ್‌ನ ವಲಯ ಮುಖ್ಯಸ್ಥ ವಿನಾಯಕ ರಾವ್ ಎಂ., ಹಿರಿಯ ವ್ಯವಸ್ಥಾಪಕ ರಾಜೇಶ್ ಎನ್.ಪಿ., ಉಪ ವ್ಯವಸ್ಥಾಪಕ ಲಕ್ಷ್ಮೀಪತಿ ಟಿ., ನೇರ ಮಾರುಕಟ್ಟೆ ಸಂಯೋಜಕ ವೆಂಕಟರೆಡ್ಡಿ ಬಿಎ., ಗ್ರಾಪಂ ಸದಸ್ಯ ಮುನೇಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಶಿಕ್ಷಕಿ ರೂಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಶಿಕ್ಷಕ ಕಾಂತರಾಜ್ ಮತ್ತಿತರರಿದ್ದರು.

Exit mobile version