ದೊಡ್ಡಬಳ್ಳಾಪುರ (Doddaballapura): ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 14 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಫೆ.8 ರಿಂದ ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.
ಫೆ.8 ಮತ್ತು 9 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಫೆ.11 ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಫೆ.16 ರಂದು ಮತದಾನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ)ವಿಭಾಗದಲ್ಲಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತಗಳ ಎಣಿಕೆ ನಡೆಯಲಿದೆ.
ಬ್ಯಾಂಕಿನ 14 ನಿರ್ದೇಶಕ ಸ್ಥಾನಗಳ ಮೀಸಲಾಯಿತಿ ಪಟ್ಟಿ
- ದೊಡ್ಡಬೆಳವಂಗಲ; ಮಹಿಳಾ ಸಮೀಸಲು
- ಎಸ್.ಎಸ್.ಘಾಟಿ; ಪರಿಶಿಷ್ಟ ಜಾತಿ
- ತೂಬಗೆರೆ; ಹಿಂದುಳಿದ ವರ್ಗ ‘ಎ’
- ಕೊನಘಟ್ಟ; ಹಿಂದುಳಿದ ವರ್ಗ ‘ಬಿ’
- ಮೆಳೆಕೋಟೆ; ಸಾಮಾನ್ಯ
- ರಾಜಘಟ್ಟ; ಸಾಮಾನ್ಯ
- ಕೊಡಿಗೇಹಳ್ಳಿ; ಸಾಮಾನ್ಯ
- ಸಿ.ಡಿ.ಅಗ್ರಹಾರ; ಸಾಮಾನ್ಯ
- ಮಧುರೆ; ಸಾಮಾನ್ಯ
- ಹೊಸಹಳ್ಳಿ; ಪರಿಶಿಷ್ಟ ಪಂಗಡ
- ಹಣಬೆ; ಸಾಮಾನ್ಯ
- ಸಾಸಲು; ಸಾಮಾನ್ಯ
- ದೊಡ್ಡಬಳ್ಳಾಪುರ ನಗರ; ಮಹಿಳೆ
- ಸಾಲ ಪಡೆಯದವರ ಮತ ಕ್ಷೇತ್ರ; ಸಾಲ ಪಡೆಯದವರು