ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕಳೆದ ವಾರ ವರ್ಗಾವಣೆಯಾಗಿದ್ದ ಡಾ.ಎನ್. ಶಿವಶಂಕರ್ (Dr.N. Shivashankar) ಅವರ ಜಿಲ್ಲಾಧಿಕಾರಿ (DC) ಸ್ಥಾನಕ್ಕೆ ಬಸವರಾಜು ಎ.ಬಿ (Basavaraju A. ಅವರನ್ನು ನೇಮಿಸಲಾಗಿದೆ.
ಈ ಕುರಿತು ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್ (T.Mahanthesh) ಆದೇಶಿಸಿದ್ದಾರೆ.
ಜನವರಿ 28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಿಲ್ಲಾಧಿಕಾರಿಯಾಗಿದ್ದ ಸೇರಿ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ (transfer) ಮಾಡಿ ರಾಜ್ಯ ಸರ್ಕಾರ ಇಂದು ಆದೇಶಿಸಲಾಗಿತ್ತು.
ಆ ವೇಳೆ ಶಿವಶಂಕರ್ ಅವರ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಅನುರಾಧ ಕೆಎನ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು.