ಲಖನೌ: ಹಿಂದೂಗಳ ಆರಾಧ್ಯ ಸ್ಥಳ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ (Satyendra Das) ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸು.
ಸತ್ಯೇಂದ್ರದಾಸ್ (Satyendra Das) ಅವರನ್ನು ಸಂಜಯಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಶಿಕ್ಷಣ ಸಂಸ್ಥೆ ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒಡೆ ಯುತ್ತಿದ್ದಾರೆ.
ಸೋಮವಾರದ ವೇಳೆ ಅವರ ದೇಹಸ್ಥಿತಿ ಗಂಭೀರವಾಗಿತ್ತು. ಸತ್ಯೇಂದ್ರ ದಾಸ್ ಅವರು ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸತ್ಯೇಂದ್ರ ದಾಸ್ ಅವರು ಅಯೋಧ್ಯೆ ಯಲ್ಲಿ ಭವ್ಯ ಶ್ರೀರಾಮಲಲ್ಲಾ ಮಂದಿರ ನಿರ್ಮಾಣಕ್ಕೆ ಮೊದಲು ಟೆಂಟ್‌ನಲ್ಲಿ ಇರಿಸಲಾಗಿದ್ದ ಶ್ರೀರಾಮ, ಸೀತೆ, ಲಕ್ಷಣ, ಆಂಜನೇಯ ಮೂರ್ತಿಗೆ ವರ್ಷಗಳ ಕಾಲದಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದರು.