Site icon Harithalekhani

ಅಯೋಧ್ಯೆ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ಆರೋಗ್ಯ ಸ್ಥಿತಿ ಗಂಭೀರ| Video

Satyendra Das, the head priest of Ayodhya Sri Ram Mandir is no more..!

Satyendra Das, the head priest of Ayodhya Sri Ram Mandir is no more..!

ಲಖನೌ: ಹಿಂದೂಗಳ ಆರಾಧ್ಯ ಸ್ಥಳ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ (Satyendra Das) ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸು.

ಸತ್ಯೇಂದ್ರದಾಸ್ (Satyendra Das) ಅವರನ್ನು ಸಂಜಯಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಶಿಕ್ಷಣ ಸಂಸ್ಥೆ ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒಡೆ ಯುತ್ತಿದ್ದಾರೆ.

ಸೋಮವಾರದ ವೇಳೆ ಅವರ ದೇಹಸ್ಥಿತಿ ಗಂಭೀರವಾಗಿತ್ತು. ಸತ್ಯೇಂದ್ರ ದಾಸ್ ಅವರು ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

https://www.harithalekhani.com/wp-content/uploads/2025/02/1000966773.mp4
ವಿಡಿಯೋ ಕೃಪೆ; IANS

ಸತ್ಯೇಂದ್ರ ದಾಸ್ ಅವರು ಅಯೋಧ್ಯೆ ಯಲ್ಲಿ ಭವ್ಯ ಶ್ರೀರಾಮಲಲ್ಲಾ ಮಂದಿರ ನಿರ್ಮಾಣಕ್ಕೆ ಮೊದಲು ಟೆಂಟ್‌ನಲ್ಲಿ ಇರಿಸಲಾಗಿದ್ದ ಶ್ರೀರಾಮ, ಸೀತೆ, ಲಕ್ಷಣ, ಆಂಜನೇಯ ಮೂರ್ತಿಗೆ ವರ್ಷಗಳ ಕಾಲದಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದರು.

Exit mobile version