ಮೈಸೂರು: ಸ್ನೇಹಿತನ ಜೀವನ ಕಟ್ಟಿಕೊಳ್ಳಲೆಂದು ಸಾಲ ಕೊಡಿ ಸಿದ್ದ ತಪ್ಪಿಗೆ ಗೆಳೆಯನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕು ದಂಡಿ ಕೆರೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ನಂಜನಗೂಡು ತಾಲೂಕಿನ ಮುಲ್ಲೂಪುರ ಗ್ರಾಮದ ಸಿದ್ದೇಶ್ (40 ವರ್ಷ) ಎಂದು ಗುರುತಿಸಲಾಗಿದೆ.
ಮೃತ ಸಿದ್ದೇಶ್ ತನ್ನ ಸ್ನೇಹಿತ ಮಣಿ ಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್‌ನಲ್ಲಿ ಕಾರು, ಜೊತೆಗೆ ತನ್ನ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಕೊಡಿಸಿದ್ದರಂತೆ. ಆತನ ಮಣಿಕಂಠ ಕೇವಲ ಎರಡು ಕಂತು ಕಟ್ಟಿ ಸುಮ್ಮನಾಗಿದ್ದ.
ಇದನ್ನೂ ಓದಿ: Doddaballapura: ರುಂಡ ಕತ್ತರಿಸಿದ ಆರೋಪಿಗೆ ಅಜೀವ ಕಠಿಣ ಕಾರಾಗೃಹ ಶಿಕ್ಷೆ
ನಂತರ ಬ್ಯಾಂಕ್‌ನವರು ಸಿದ್ದೇಶ್‌ಗೆ ಕರೆಮಾಡಿ ಸಾಲ ತೀರಿಸುವಂತೆ ಒತ್ತಡ ಹೆಚ್ಚಿಸಿದ್ದಾರೆ. ಇದರಿಂದ ಮನನೊಂದ ಸಿದ್ದೇಶ್, ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.