ದೊಡ್ಡಬಳ್ಳಾಪುರ (Doddaballapura): ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯ ಮೇಲರಿದು ಪರಾರಿಯಾಗಿದ್ದ ಕ್ಯಾಂಟರ್‌ನ್ನು ಪೊಲೀಸರು ಪತ್ತೆಮಾಡಿದ್ದಾರೆ.
ಕಳೆದ ಶನಿವಾರ ಅಂಗನವಾಡಿಯಲ್ಲಿ ಕರ್ತವ್ಯ ಮುಗಿಸಿ, ಕಂಟನಕುಂಟೆಯ (Kantanakunte) ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ, ಗುಂಡಮಗೆರೆ ಹೊಸಹಳ್ಳಿ ನಡುವಿನ ಕೆಇಬಿ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದಿತ್ತು.
ಈ ವೇಳೆ ನೆಲಕ್ಕೆ ಬಿದ್ದ ಶಾಮಲ ದೇವಿ (Shamala Devi) ಅವರ ಮೇಲೆ ಮೇಲೆ ಹರಿದು ಪರಾರಿಯಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾಮಲ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದರು.
ಹೊಸಹಳ್ಳಿ (Hosahalli) ಸಮೀಪದ ಉಜ್ಜನಿ (Ujjani) ಕಾಲೋನಿಯ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಸುತ್ತಿದ್ದ ಶ್ಯಾಮಲ ದೇವಿ (Shamala Devi) ಅವರು ಕಂಟನಕುಂಟೆಯಲ್ಲಿ ವಾಸವಿದ್ದರು.
ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಭೇದಿಸಿದ ಪೊಲೀಸರು
ಘಟನೆ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಪರಾರಿಯಾಗಿದ್ದ ವಾಹನವನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು.
ಅಪಘಾತ ಸಂಭವಿಸಿದ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದೆ ಇರುವುದು, ಪ್ರತ್ಯಕ್ಷದರ್ಶಿಗಳು ಇಲ್ಲದೆ ಇರುವ ಕಾರಣ ವಾಹನ ಪತ್ತೆ ಮಾಡುವುದು ಸಮಸ್ಯೆಯಾಗಿತ್ತು..
ಆದರೆ ಈ ಕುರಿತು ತೀವ್ರ ತನಿಖೆ ಕೈಗೊಂಡ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಕೇವಲ ಒಂದು ವಾರಕ್ಕೆ ಮುನ್ನವೇ ಅಪಘಾತವೆಸಗಿ ಪರಾರಿಯಾಗಿದ್ದ ಚಾಲಕನನ್ನು ಬಂಧಿಸಿ, ಕ್ಯಾಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಅನ್ವಯ ಕೊರಟಗೆರೆ ಮೂಲದ ಕ್ಯಾಂಟರ್‌ನ್ನು ಇದಾಗಿದ್ದು, ಕಲ್ಲುಕುಂಟೆ, ಹೊಸಹಳ್ಳಿ ಮಾರ್ಗದ ಮೂಲಕ ದೊಡ್ಡಬಳ್ಳಾಪುರದ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.