ಬೆಂಗಳೂರು: ಮಹಾತ್ಮಗಾಂಧಿ ನರೇಗಾ ಯೋಜನೆ (mgnrega) ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಗಂಗವಾರಚೌಡಪ್ಪನಹಳ್ಳಿ ಗ್ರಾಮಪಂಚಾಯಿತಿಗೆ ಅತ್ಯುತ್ತಮ ಗ್ರಾಮಪಂಚಾಯಿತಿ ಪುರಸ್ಕಾರ ದೊರೆತಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆ (mgnrega) ಅನುಷ್ಠಾನಕ್ಕೆ ಗಂಗವಾರಚೌಡಪ್ಪನಹಳ್ಳಿ ಗ್ರಾಮಪಂಚಾಯಿತಿಗೆ ಅತ್ಯುತ್ತಮ ಗ್ರಾಮಪಂಚಾಯಿತಿ ಪ್ರಶಸ್ತಿ ಸಂದಿದೆ.
ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ (Shreenath Gowda) ನೇತೃತ್ವದಲ್ಲಿ, ಪಿಡಿಒ ಶ್ರೀನಿವಾಸ್ (Shreenivas) ಹಾಗೂ ಸಿಬ್ಬಂದಿಗಳು ಬಹಳ ಆಸಕ್ತಿವಹಿಸಿದ್ದಾರೆ.
200ಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ ಬಾಸ್ಕೆಟ್ ಬಾಲ್ ಕೋರ್ಟ್, ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡ ನೆಟ್ಟಿರುವುದು, ಕೃಷಿಹೊಂಡ ನಿರ್ಮಾಣ, ಬದು ನಿರ್ಮಾಣ, ಅತಿ ಹೆಚ್ಚುವ ಮಾನವ ದಿನಗಳ ಸೃಜನೆ ಸೇರಿದಂತೆ ಶ್ರಮಕ್ಕೆ ಈ ಪುರಸ್ಕಾರ ದೊರೆತಿದೆ.