ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ನಟಿ, ರಾಜಕೀಯದಲ್ಲೂ ದೊಡ್ಡ ಹೆಸರು ಮಾಡಿರುವ ಮಾಜಿ ಸಚಿವೆ ರೋಜಾ (Roja) ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಈ ಬೆನ್ನಲ್ಲೇ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ, ಅನೇಕರು ಸಾವನಪ್ಪಿದ್ದು, ರೋಜಾ ಅವರು ಟ್ರೋಲ್ಗೆ ಒಳಗಾಗುವಂತೆ ಮಾಡಿದೆ.
ರೋಜಾ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಎರಡು ಬಾರಿ ಶಾಸಕಿಯಾಗಿ ಗೆದ್ದು ಸಂಚಲನ ಮೂಡಿಸಿದ್ದ ರೋಜಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು.
ರೋಜಾ ಅವರು ಸಚಿವರಾದಾಗ, ನಂತರವು ಬಹಳಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ.
ಅಂತೆಯೇ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನದ ನಂತರ ಸಂಭವಿಸಿದ ಕಾಲ್ತುಳಿಕ್ಕೆ ಕಾಲ್ಗುಣ ಕಾರಣ, ಅಷ್ಟು ದಿನ ಏನು ಆಗ್ದೆ ಇರುವುದು, ಈಕೆ ಅಲ್ಲಿಗೆ ತೆರಳಿದ ನಂತರ ಕಾಲ್ತುಳಿತ ಸಂಭವಿಸಿದೆ.
ಈ ಕುರಿತು ಟ್ರೋಲ್ ಆರಂಭವಾಗಿದ್ದು, ಲೆಗ್ಗು ಬಾಬು.. ಲೆಗ್ಗು ಅದೇಮೈನಾ ಸಾಮಾನ್ಯ ಲೆಗ್ಗಾ.. ಐರನ್ ಲೆಗ್ಗು (ಕಾಲ್ಗುಣ ಸ್ವಾಮಿ, ಕಾಲ್ಗುಣ.. ಅದೇನಾದ್ರು ಸಾಮಾನ್ಯವಾದ ಕಾಲ್ಗುಣವೇ) ಎಂದು..
ಆ ಪಾದಾಲ ಮಹಿಮಾ.. ಪ್ರಯಾಗ್ ರಾಜ್ಗೆ ಬಂದಿದೆ ಅಲ್ಲಿನ ಭಕ್ತರು ಭಯಪಟ್ಟು, ಪ್ರಾಣಾಲ ಪೈನ ಒಚ್ಚಿಂದಿ (ಕಾಲಿನ ಮಹಿಮೆ.. ಪ್ರಯಾಗ್ ರಾಜ್ಗೆ ಬಂದಿದೆ. ಅಲ್ಲಿ ಭಕ್ತರು ಭಯದಿಂದ ಪ್ರಾಣಕ್ಕೆ ಅಪಾಯ ಎದುರಾಗಿದೆ) ಎಂದು ಸಿಕ್ಕಾಪಟ್ಟೆ ಟೋಲ್ ಮಾಡಲಾಗುತ್ತಿದೆ.
ಇದಕ್ಕು ಮುನ್ನಾ ಕೂಡ ರೋಜಾ ಅವರು ಅನೇಕ ಟ್ರೋಲ್ಗೆ ಒಳಗಾಗಿದ್ದಾರೆ, ವೈನಾಟ್ ಒನ್ ಸೆವಂಟಿ ಫೈವ್ ಎಂದಿದ್ದು, ಗೇಮ್ ಚೇಂಜರ್ ಸಿನಿಮಾ ಬ್ಲಾಕ್ ಬಾಸ್ಟರ್ ಆಗುತ್ತದೆ ಎಂದಿದ್ದು, ಮುಂತಾದ ವಿಚಾರಗಳ ಕುರಿತು ರೋಜಾ ಅವರು ಟ್ರೋಲ್ ಆಗಿದ್ದರು.