Site icon ಹರಿತಲೇಖನಿ

BJP ಯಲ್ಲಿನ ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರೀತಂ ಗೌಡ

Preetam Gowda added fuel to the burning fire in BJP

Preetam Gowda added fuel to the burning fire in BJP

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ಬಣ ಬಡಿದಾಟ ತರಾಕ್ಕೇರಿರುವ ಬೆನ್ನಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ (Preetham Gowda) ಗೌಡ ಉರಿಯು ಬೆಂಕಿಗೆ ತುಪ್ಪ ಸುರಿಯುವಂತೆ ಮಾತನಾಡಿದ್ದು, ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ವೇದಿಕೆ ನಿರ್ಮಾಣ ಮಾಡಿದ್ದಾರೆ.

ಬೆಳಗ್ಗೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಸಂಸದ ಡಾ ಸುಧಾಕರ್‌ (Dr K Sudhakar) ಹಾಗೂ ಇತರೆ ಮುಖಂಡರ ಸಲಹೆಯಂತೆ ಧೋರಣೆ ಬದಲಿಸಿಕೊಳ್ಳುವ ಮಾತುಗಳನ್ನು ಆಡಿದ್ದರು. ಆದರೆ ಅವರ ಬೆಂಬಲಿಗ ಪ್ರೀತಂ ಗೌಡ (Preetham Gowda) ಸಂಸದ ಡಾ ಸುಧಾಕರ್‌ ವಿರುದ್ಧ ಮೊನಚಾದ ಮಾತಿಗಳಿಂದ ತಿರುಗೇಟು ನೀಡುವ ಮೂಲಕ ಮತ್ತಷ್ಟು ಕಿಚ್ಚು ಹೊತ್ತಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ (Preetham Gowda), ಬಿಜೆಪಿಯ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಸಂಸದ ಡಾ ಕೆ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. 4-5 ವರ್ಷಗಳ ಹಿಂದೆ ಪಕ್ಷ ಸೇರಿರುವರಿಗೆ ಈ ಪ್ರಕ್ರಿಯೆ ಗೊತ್ತಿರಲ್ಲ. ನಿನ್ನೆ ಡಾ ಸುಧಾಕರ್ ಮಾತಾಡಿದ್ದನ್ನು ನೋಡಿದರೆ ನನಗೆ ಅರ್ಥ ಆಯಿತು.

ಅವರಿಗೆ ಪಕ್ಷ ಈ ಐದು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ 3 ಬಾರಿ ಬಿ ಫಾರಂ ಕೊಟ್ಟಿದೆ. ಅಲ್ಲದೇ ನಾಲ್ಕು ವರ್ಷ ಡಾ ಕೆ ಸುಧಾಕರ್​ ಅವರನ್ನು ಮಂತ್ರಿ ಮಾಡಲಾಗಿದೆ. ಸುಧಾಕರ್​​ ಶಾಸಕ ಆಗಿ, ಮಂತ್ರಿ ಆಗಿ, ಈಗ ಸಂಸದರಾಗಿದ್ದಾರೆ.

ಚಿಕ್ಕಬಳ್ಳಾಪುರ ಬರೆದುಕೊಟ್ಟಿಲ್ಲ

ಬಿಜೆಪಿಯಲ್ಲಿ ಜಿಪಿಎ ವ್ಯವಸ್ಥೆ ಇಲ್ಲ. ಸಂಸದ ಆದ ಮಾತ್ರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಅವರಿಗೆ ಬರೆದು ಕೊಡಲಾಗದು. ಸುಧಾಕರ್ ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ತಾವು ಹೇಳಿದಂತೆ ಕೇಳಬೇಕೆಂಬ ಮನಸ್ಥಿತಿಯಿಂದ ಸುಧಾಕರ್ ಹೊರಗೆ ಬರಬೇಕು.

ಇದು ಕಾರ್ಪೊರೇಟ್ ಸಿಸ್ಟಮ್ ಅಲ್ಲ, ಪಕ್ಷದ ಸಿಸ್ಟಮ್, ನಮ್ಮ ಪಕ್ಷದ ಸಿಸ್ಟಮ್ನ ಸುಧಾಕರ್‌ (Sudhakar) ಅರ್ಥ ಮಾಡ್ಕೋಬೇಕು.. ಕೇಡರ್ ಬೇಸ್ ಪಾರ್ಟಿ ಇದು, ಬಹಳ ಗೊತ್ತಿದೆ ಎಂದು ಮಾಧ್ಯಮಗಳ ಮುಂದೆ ದೊಡ್ಡ ದೊಡ್ಡ ಮಾತುಗಳನ್ನು ಆಡಬಾರದು.. ಅವರು ಪಾರ್ಟಿಗ್ ಬಂದ್ ಕೇವಲ 5 ವರ್ಷ ಆಗಿದೆ. ಮಂತ್ರಿ ಆಗಿದ್ದೋರು, ಸೋತರು ಎಂಪಿ ಟಿಕೆಟ್ ತಗೊಂಡ್ ಎಂಪಿ ಆಗಿದ್ದಾರೆ.

ಅವರು ಪಿಚ್ಚರ್ ಲೈನಲ್ ಜಾಸ್ತಿ ಇರೋದ್ರಿಂದ ಫಾಸ್ಟಾಗಿ ಎಲ್ಲಾ ಆಗಬೇಕು ಅನಿಸ್ತಾ ಇದೆಯೇನೋ‌‌.. ಎಂಎಲ್‌ಎ ಆದ್ರೂ, ಮಂತ್ರಿ ಆದ್ರೂ, ಆದ ಮೇಲೆ ನೆಕ್ಸ್ಟ್ ರಾಜ್ಯಾಧ್ಯಕ್ಷ ಅಗಬೇಕು ಅಂತಿತ್ತೇನೋ, ಮುಖ್ಯಮಂತ್ರಿ ಆಗ ಬೇಕೆಂಬ ಲೆಕ್ಕಾಚಾರ ಇರಬಹುದು, ನನಗೆ ಗೊತ್ತಿಲ್ಲ.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗ್ ಬರ್ಲಿ, ಪಕ್ಷ ಕಟ್ಲಿ.. ಇವೆಲ್ಲ ಅಹಮ್ಮಿನ ಮಾತುಗಳನ್ನು ಬಿಡಬೇಕು.. ಇವರನ್ನೇ ಮಂತ್ರಿ ಮಾಡಿ, ಇವರಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಕೊಟ್ಟಿದ್ವಿ… ಅವರೇ ಗೆಲ್ಲಲಿಲ್ಲ ಪಾಪ..

ಮುಚ್ಕೊಂಡ್ರೆ ಸಾಕು

ಮತ್ತಡ ವಿಜಯೇಂದ್ರ ಬಂದ್ ಪಕ್ಷ ಕಟ್ಲಿ ಎನ್ನುವ ದುರಂಕಾರದ ಮಾತುಗಳನ್ನು ನಿಲ್ಲಿಸಬೇಕು.. ಯಡಿಯೂರಪ್ಪ, ವಿಜಯೇಂದ್ರ ಕೇವಲ ವ್ಯಕ್ತಿಯಲ್ಲ ರಾಜ್ಯದ ಅಧ್ಯಕ್ಷರು. ಆ ಅಧ್ಯಕ್ಷ ಸ್ಥಾನಕ್ಕೆ ಗೌರವ ನೀಡಿ ಮಾತಾಡುವುದ ಕಲಿಬೇಕು‌‌.

ಅವರು ಅದ್ ಬಿಚ್ಚಿಡ್ತೀನಿ, ಇದ್ ಬಿಚ್ಚಿಡ್ತೀನಿ ಅನ್ನೋದನ್ನ ಕಾರ್ಯಕರ್ತರು ಗಮನಿಸಿದ್ದಾರೆ. ಬೇರೆಯವರದನ್ನ ಬಿಚ್ಚೋದ್ ಬೇಡ.‌.. ಅವರದ್ದೇನಾದ್ರೂ ಬಿಚ್ಕೊಂಡಿದ್ದರೆ ಅದುನ್ ಮುಚ್ಕೊಂಡ್ರೆ ಸಾಕು.

ಮಾತಿನ ಶೈಲಿ ಇದೆ.‌ ಮಿಸ್ಟರ್ ಸುಧಾಕರ್‌ ನೀವು ಡಾ ಸುಧಾಕರ್‌ ಇರಬಹುದು ಗಂಭೀರವಾಗಿ ಇಟ್ಕೊಂಡು, ಪಕ್ಷದ ಚೌಕಟ್ಟಿನಲ್ಲಿ ಇರಬೇಕು ಎಂದು ಕಾರ್ಯಕರ್ತರ ಪರವಾಗಿ ಮನವಿ ಮಾಡ್ತೀನಿ ಎಂದು ಪ್ರೀತಂ ಗೌಡ ವಾಗ್ದಾಳಿ ಮಾಡಿದರು.

Exit mobile version