ಹೈದರಾಬಾದ್: ಕ್ಯಾಂಪಸ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿನಿ (Student) ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ಮಲ್ಲಾರೆಡ್ಡಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ (Mallareddy College) ನಡೆದಿದೆ.
ಮಲ್ಲಾರೆಡ್ಡಿ ಕಾಲೇಜು ಯಾವುದೋ ಘಟನೆಯಿಂದ ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ಮತ್ತೊಂದು ಘಟನೆಯಿಂದ ಮಲ್ಲಾರೆಡ್ಡಿ ಕಾಲೇಜು ಹೆಸರು ಸುದ್ದಿಯಲ್ಲಿದೆ.
ಮಲ್ಲಾರೆಡ್ಡಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ (Student) ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮೇಡ್ಚಲ-ಪೇಟ್ ಬಶೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿನಿ ಕೀರ್ತಿ (Keerthy), ಕ್ಯಾಂಪಸ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ 4ನೇ ಮಹಡಿಯ ಕಿಟಕಿಯಿಂದ ಜಿಗಿಯಲು ಯತ್ನಿಸಿದ್ದಾಳೆ. ಇದನ್ನು ಕಂಡ ಭದ್ರತಾ ಸಿಬ್ಬಂದಿ ಆಕೆಯನ್ನು ಹಿಡಿದು ಕೆಳಗೆ ಬೀಳದಂತೆ ರಕ್ಷಿಸಿದ್ದಾರೆ.
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ (Video) ವೈರಲ್ ಆಗುತ್ತಿದೆ.