ಯಲಹಂಕ: ರಾಜ್ಯ ಬಿಜೆಪಿಯಲ್ಲಿ(BJP) ಕೆಸರೆರಚಾಟ ತೀವ್ರವಾಗಿದ್ದು ಸಂಸದ ಡಾ ಕೆ ಸುಧಾಕರ್ (Dr K Sudhakar) ವಿರುದ್ಧ ಪ್ರೀತಂ ಗೌಡ (Preetham Gowda)ಬೆನ್ನಲ್ಲೇ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ವಾಗ್ದಾಳಿ ನಡೆಸಿದ್ದು, ಪಕ್ಷದಲ್ಲಿ ಇದ್ರೆ ಇರು, ಇಲ್ಲವಾದ್ರೆ ಹೋಗ್ತಾ ಇರು ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಸಂದೀಪ್ ರೆಡ್ಡಿ ವಿಶ್ವನಾಥ್ ಶಿಷ್ಯ ಅಂತಾರೆ ಆತ ಬಿಜೆಪಿ ಶಿಷ್ಯ. 6 ತಿಂಗಳು ನೋಡಿ, ಕೆಲಸ ಮಾಡುತ್ತಾನೋ ಇಲ್ಲವೋ ನೋಡೋಣ.
ನಾನು ಎಚ್ಚರಿಕೆ ಕೊಡುತ್ತೇನೆ, ಮುಂದೆ ಹೀಗೆ ಮಾತಾಡಿದ್ರೆ ನಾನು ಬೇರೆ ರೀತಿಯಲ್ಲೇ ಮಾತಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನನ್ನ ಬಗ್ಗೆ ನಿನಗಿನ್ನೂ ಗೊತ್ತಿಲ್ಲ.. 45 ವರ್ಷ ಪಾರ್ಟಿ ಕಟ್ಟುವಾಗ ಕೇಸುಗಳನ್ನು ಎದುರಿಸಿಯೇ ಬಂದಿದ್ದೇನೆ.
40 ವರ್ಷದಿಂದ ನಾವು ಇದ್ರೂ ಮಂತ್ರಿ ಬಾಯಿ ಮುಚ್ಕೊಡು ಇದ್ದೀವಿ.. ಏನೇ ಇದ್ರೂ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತಾಡಿ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಂದು ಸ್ಥಾನಗೆದ್ದು ತೋರಿಸಿ ಎಂದಿದ್ದೀರಿ. ಮಿನಿಸ್ಟರ್ ಆಗಿದ್ದವರು ನೀವು, ನೀವೇ ಸೋತಿದ್ದೀರಿ.
ಅವಕಾಶ ಕೊಡಿ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಹೇಗೆ ಸಂಘಟನೆ ಮಾಡುತ್ತೇನೆ ಎಂದು ನಾನು ತೋರಿಸುತ್ತೇನೆ. ನಾನು ಸ್ನೇಹ ಕ್ಕೂ ಸಿದ್ದ, ಸಮರಕ್ಕೂ ಸಿದ್ದ. ನನ್ನ ಬಗ್ಗೆ ನಿನಗಿನ್ನೂ ಗೊತ್ತಿಲ್ಲ.. 45 ವರ್ಷ ಪಾರ್ಟಿ ಕಟ್ಟುವಾಗ ಕೇಸುಗಳನ್ನು ಎದುರಿಸಿಯೇ ಬಂದಿದ್ದೇನೆ.
ಸುಧಾಕರ್ ಒಂದು ಹೆಜ್ಜೆ ಹೊರಗಿಟ್ಟೇ ಈ ರೀತಿ ಮಾತನಾಡುತ್ತಿದ್ದು, ಹೋಗೋದಾದರೆ ಹೋಗಲಿ. ಅವರು ಮಾತನಾಡಿರೋದು ನನಗೆ, ನಮ್ಮ ಕಾರ್ಯಕರ್ತರಿಗೆ ಹಿಡಿಸಲಿಲ್ಲ. ದುರಹಂಕಾರಿ, ಸರ್ವಾಧಿಕಾರಿಯಂತಹ ಹೇಳಿಕೆ ನೀಡಿದ್ದಾರೆ.
ಎರಡೆರಡು ಫೋರ್ಟ್ ಪೊಲಿಯೋ ಕೊಟ್ಟಿದ್ರು
ನನ್ನ ಕ್ಷೇತ್ರದ ವಿಚಾರವಾಗಿಯೂ ಹೇಳಿಕೆ ನೀಡಿದ್ದಾರೆ. ಸುಧಾಕರ್ ಅವರು ನನ್ನಿಂದಲೇ ಸರ್ಕಾರ ರಚನೆ ಆಯ್ತು ಎಂಬ ಹೇಳಿಕೆ ನೀಡಿದ್ದಾರೆ. ಆದ್ರೆ ಮೆಜಾರಿಟಿ ಬಂದ ಮೇಲೆ ಬಂದ ಕೊನೆಯ ಶಾಸಕ ಸುಧಾಕರ್. ನಾನು ಕೂಡ ಇದ್ದೆ, ಎರಡೆರಡು ಫೋರ್ಟ್ ಪೊಲಿಯೋ ಕೊಟ್ಟಿದ್ರು. ಸಚಿವರಾಗಿದ್ದವರು ಟಿಕೆಟ್ ಕೊಟ್ರು ಯಾಕೆ ಸೋತ್ರಿ? ಎಂದು ಪ್ರಶ್ನೆ ಮಾಡಿದರು.
ನೀವು ಸಚಿವರಾಗಿದ್ದಾಗ ದುರಂಹಕಾರಿ ಆಗಿರಲಿಲ್ವಾ? ಎಂದು ಸುಧಾಕರ್ ಅವರನ್ನು ಪ್ರಶ್ನೆ ಮಾಡಿದರು. ಚಿಕ್ಕಬಳ್ಳಾಪುರ ಜನರಿಗೆ ಸಿಗುತ್ತಿರಲಿಲ್ಲ, ನಮ್ಮ ಶಾಸಕರ ಫೋನ್ ತೆಗೀತಿರಲಿಲ್ಲ.
ವರಿಷ್ಠರಿಗೆ ಹೇಳಿ ತೀರ್ಮಾನ ತಗೋತೇನೆ ಅಂಥಾ ಹೇಳಿದ್ದೀರಿ. ತಾಕತ್ ಇದ್ರೆ ಪಕ್ಷ ಬಿಟ್ಟು ಚುನಾವಣೆಗೆ ಬಾ ಎಂದು ವಿಶ್ವನಾಥ್ (SR Vishwanath) ಅವರು ಡಾ ಕೆ ಸುಧಾಕರ್ (Dr K Sudhakar) ಅವರಿಗೆ ಸವಾಲು ಹಾಕಿದರು.
ಅಲ್ಲದೆ ಪಕ್ಷದ ಚೌಕಟ್ಟಿನಲ್ಲಿದ್ರೆ ಇರಿ, ಏನೇ ಇದ್ರೂ ವರಿಷ್ಠರ ಜತೆ ಮಾತಾಡಿ. ಇಲ್ಲಾಂದ್ರೆ ಪಕ್ಷ ಬಿಟ್ಟು ಹೋದ್ರೆ ಹೋಗಿ, ನಿಮ್ಮಂಥೋರು ಇಲ್ಲಿರೋ ಬದಲು ಹೋದರೇನೇ ಸರಿ ಎಂದು ವಿಶ್ವನಾಥ್ ಹೇಳಿದರು.
ಕಳೆದ ಚುನಾವಣೆ ವೇಖೆ ಗೌರಿಬಿದನೂರುರಲ್ಲಿ ಯಾರಿಗೆ ಸಪೋರ್ಟ್ ಮಾಡ್ದೆ ಬಿಜೆಪಿಗ್ ಮಾಡ್ದಾ.. ಕಾಂಗ್ರೆಸ್ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ಗೆ ಸಪೂರ್ಟ್ ಮಾಡಿದ್ದು ಊರಿಗೆಲ್ಲ ಗೊತ್ತು, ಬಾಗೇಪಲ್ಲಿಲ್ ಯಾರಿಗ್ ಮಾಡ್ದೆ, ಹೊಸಕೋಟೆ ಯಾರಿಗ್ ಮಾಡ್ದೆ ಕಾಂಗ್ರೆಸ್ ಕ್ಯಾಂಡಿಡೇಟ್ಗೆ, ದೇವನಹಳ್ಳಿ ಸಪೋರ್ಟ್ ಮಾಡ್ದೆ ಕೆಹೆಚ ಮುನಿಯಪ್ಪಗೆ ಮಾಡ್ದೆ.. ಹೋಗಿ ಅಲ್ಲಿನ ಕಾರ್ಯಕರ್ತರ ಕೇಳು.
ಇಷ್ಟ ಇದ್ದರೆ ಇರು. ನಿನ್ನಂತವರು ಲಕ್ಷಾಂತರ ಜನ ಇದ್ದಾರೆ.. ಹೊಸದಾಗ್ ಪಾರ್ಟಿಗ್ ಬಂದವರು ಮುಚ್ಕೊಂಡ್ ಕೆಲಸ ಮಾಡ್ತಿಲ್ವಾ..? ನಾಲ್ಕು ವರ್ಷ ಮನೇಲ್ ಇರೋಕ್ ಆಗಲ್ಲ ಅಂದೆ.. ಅದುಕ್ ಕಾರ್ಯಕರ್ತರು ಇಷ್ಟೆಲ್ಲ ಕಷ್ಟ ಬೀಳಬೇಕಿತ್ತಾ..?
ಬಿಜೆಪಿ ಅಧಿಕಾರಕ್ಕೆ ಬರದೆ ಇರಲು ಕೋವಿಡ್ ಸಂದರ್ಭದಲ್ಲಿ ಮಾಡಿದ ಹಗರಣ, ಅವ್ಯವಹಾರ ಕಾರಣ… ಕೆಲವೇ ಕೆಲವು ಮಂತ್ರಿ ಏನಿದ್ದೀರಿ.. ಕಾರ್ಯಕರ್ತರ ಹತ್ತಿರಕ್ಕೆ ಬಿಟ್ಕೊಳ್ಳದೆ ಪಕ್ಷಕ್ಕೆ ಅಧಿಕಾರಕ್ಕೆ ಬರದಂತೆ ಮಾಡುದ್ರಿ ಎಂದು ಆರೋಪಗಳ ಸುರಿಮಳೆಗೈದರು.