Site icon ಹರಿತಲೇಖನಿ

ವಿರೋಧದ ನಡುವೆಯೂ 23 ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ

Appointment of BJP president for 23 districts

BJP president

ಬೆಂಗಳೂರು: ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ರಾಜ್ಯ ಬಿಜೆಪಿಯ (BJP) 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು (BJP district president) ಅಧಿಕೃತವಾಗಿ ನೇಮಿಸಲಾಗಿದೆ.

ಈ ಪೈಕಿ 16 ಜಿಲ್ಲೆಗಳಿಗೆ ಹಾಲಿ ಅಧ್ಯಕ್ಷರನ್ನೇ ಮುಂದುವರೆಸಿದ್ದು, ಏಳು ಜಿಲ್ಲೆಗಳಿಗೆ ಬದಲಾವಣೆ ಮಾಡಿ ಹೊಸಬರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹೊಸ ಜಿಲ್ಲಾಧ್ಯಕ್ಷರು: ಕಲಬುರಗಿ ಗ್ರಾಮಾಂತರ- ಅಶೋಕ್‌ ಶಾಂತಪ್ಪ ಬಗಲಿ, ಯಾದಗಿರಿ- ಬಸವರಾಜ ವಿಭೂತಿಹಳ್ಳಿ, ಕೊಪ್ಪಳ- ದಡೇಸಗೂರು ಬಸವರಾಜ್‌, ವಿಜಯನಗರ- ಸಂಜೀವರೆಡ್ಡಿ ಎಸ್., ಚಿಕ್ಕಬಳ್ಳಾಪುರ-ಬಿ.ಸಂದೀಪ್, ಕೋಲಾರ- ಓಂ ಶಕ್ತಿ ಛಲಪತಿ.

ಇದನ್ನೂ ಓದಿ: ತಾರಕಕ್ಕೇರಿದ ಬಿಜೆಪಿ ಬಣ ಬಡಿದಾಟ.. ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಂಸದ ಡಾ.ಕೆ ಸುಧಾಕರ್‌

2ನೇ ಬಾರಿಗೆ ಮುಂದುವರಿದವರು: ಮೈಸೂರು ನಗರ-ಎಲ್.ನಾಗೇಂದ್ರ, ಚಾಮರಾಜನಗರ-ಸಿ.ಎಸ್.ನಿರಂಜನಕುಮಾರ್, ದಕ್ಷಿಣ ಕನ್ನಡ-ಸತೀಶ್ ಕುಂಪಲ, ಚಿಕ್ಕಮಗಳೂರು- ದೇವರಾಜ ಶೆಟ್ಟಿ, ಉತ್ತರಕನ್ನಡ-ನಾರಾಯಣ ಶ್ರೀನಿವಾಸ ಹೆಗಡೆ, ಹುಬ್ಬಳ್ಳಿ-ಧಾರವಾಡ- ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ- ನಿಂಗಪ್ಪಸುತ್ತಗಟ್ಟಿ, ಬೆಳಗಾವಿ ನಗರ-ಗೀತಾ ಸುತಾರ್, ಬೆಳಗಾವಿ ಗ್ರಾಮಾಂತರ- ಸುಭಾಷ್ ದುಂಡಪ್ಪ ಪಾಟೀಲ್.

ಚಿಕ್ಕೋಡಿ-ಸತೀಶ್ ಅಪ್ಪಾಜಿಗೋಳ್, ಬೀದರ್-ಸೋಮನಾಥ ಪಾಟೀಲ್, ಕಲಬುರಗಿ ನಗರ- ಚಂದ್ರಕಾಂತ ಪಾಟೀಲ್, ಬಳ್ಳಾರಿ-ಅನಿಲ್ ಕುಮಾರ್ ಮೋಕಾ, ಬೆಂಗಳೂರು ಉತ್ತರ-ಎಸ್.ಹರೀಶ್, ಬೆಂಗಳೂರು ಕೇಂದ್ರ-ಸಪ್ತಗಿರಿಗೌಡ, ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ.

ಇದನ್ನೂ ಓದಿ; ಬಿಜೆಪಿ ಹಾಲಿ ಶಾಸಕರಿಂದ ನನ್ನ ಸೋಲಿಸಲು ಷಡ್ಯಂತ್ರ; ಡಾ.ಕೆ ಸುಧಾಕರ್ ಕೆಂಡಾಮಂಡಲ

Exit mobile version