ಹಾವೇರಿ: ಕನ್ನಡದ ಸುಪ್ರಸಿದ್ದ ರಿಯಾಲಿಟಿ ಶೋ ಬಿಗ್‌ಬಾಸ್ (Big boos) ಸೀಸನ್ 11ಕ್ಕೆ ತೆರೆಬಿದ್ದಿದೆ. ಹನುಮಂತು (Hanumanthu) ಬಿಗ್‌ಬಾಸ್ ವಿನ್ನರ್ ಪಟ್ಟ ಅಲಂಕರಿಸಿದ್ದು, ಇಂದು ಹನುಮಂತಗೆ ಸ್ವಗ್ರಾಮ ಚಿಲ್ಲೂರ ಬಡ್ಡಿಯಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.
ಹನುಮಂತುಗೆ (Hanumanthu) ಹೂವಿನ ಹಾರ ಹಾಕಿ ತೆರೆದ ವಾಹನದಲ್ಲಿ ಮೆರವಣಿಗೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಭರಮದೇವರು ವೃತ್ತದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.
ಶಾಲು, ಹೂವಿನ ಹಾರ ಹಾಕಿ ಬಳಿಕ ಸವಣೂರು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಡಿಜೆ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಹನುಮಂತು (Hanumanthu) ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹನುಮಂತ ಜೊತೆ ಸೆಲ್ಪಿ ತೆಗೆಯಲು ಮುಗಿಬಿದ್ದರು. ಜನರತ್ತ ಕೈ ಬಿಸಿ, ಕೈ ಮುಗಿದು ಹನುಮಂತು (Hanumanthu) ಧನ್ಯವಾದ ತಿಳಿಸಿದರು.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್ 11ನೇ ಸೀಸನ್ ನಲ್ಲಿ ರಿಯಾಲಿಟಿ ಶೋನಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರು ಬಡ್ಡಿ ಗ್ರಾಮದ ನಿವಾಸಿ ಹನುಮಂತ ಗೆಲುವು ಸಾಧಿಸಿ, ಗೆಲುವಿನ ಬಳಿಕ ಮೊದಲ ಬಾರಿಗೆ ತನ್ನ ತವರೂರಿಗೆ ಆಗಮಿಸಿದ್ದಾರೆ.
5.23 ಕೋಟಿ ಮತಗಳನ್ನು ಪಡೆದಿದ್ದ ಹನುಮಂತು, ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆ ಬರೆದು ಕಪ್ ಹಾಗೂ 50 ಲಕ್ಷ ಗಳಿಸಿದ್ದ ಹನುಮಂತು.