ಬೆಂಗಳೂರು: ಇತ್ತೀಚೆಗೆ ಮುಕ್ತಾಯಕಂಡ ಕನ್ನಡದ ಬಿಗ್ ಬಾಸ್ 11ರಲ್ಲಿ (Bigg Boss) ಗಮನ ಸೆಳೆದಿದ್ದು ಹನುಮಂತು ಮತ್ತು ಧನರಾಜ್ ಆಚಾರ್ ಅವರ ನಿಷ್ಕಲ್ಮಶ ಸ್ನೇಹ.
ಇಡೀ ಸೀಸನ್‌ನಲ್ಲಿ ಈ ಗೆಳೆತನ ಹೈಲೆಟ್ ಆಗಿತ್ತು. ಅಲ್ಲದೆ ನಿರೂಪಕ ಕಿಚ್ಚ ಸುದೀಪ್ ಅವರ ಮೆಚ್ಚುಗೆಯನ್ನೂ ಸ್ವೀಕರಿಸಿತ್ತು.
ಅಂತೆಯೇ ಇದೀಗ ತನ್ನ ಗೆಳೆಯನ ಗೆಲುವನ್ನು ತಾನೇ ಗೆದ್ದಷ್ಟು ಸಂಭ್ರಮಿಸಿದ್ದಾರೆ ಧನರಾಜ್
ಹೌದು, ಇಂದು ತಮ್ಮ ಅಧಿಕೃತ ಇನ್‌ಸ್ವಾಗ್ರಾಮ್ ನಲ್ಲಿ ಧನರಾಜ್ ಆಚಾರ್ ವಿನ್ನರ್ ಹನುಮಂತು ಅವರೊಂದಿಗಿರುವ ಫೋಟೋ ಶೆರ್ ಮಾಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಲಮಾಣಿ ಅದ್ಭುತ ಗೆಲುವನ್ನು ಸಾಧಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು 11ನೇ ಸೀಸನ್‌ನಲ್ಲಿ ಈ ಪ್ರಮಾಣದ ಪರ್ಫಾಮೆನ್ಸ್ ನೀಡಿ, ಇಂಥ ದೊಡ್ಡ ಗೆಲುವನ್ನು ಹನುಮಂತು ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದ ಯಾರೂ ಊಹಿಸಿರಲಿಲ್ಲ. ಸದ್ಯ ಹನುಮಂತ ಗೆಲುವಿನ ಖುಷಿಯಲ್ಲಿದ್ದಾರೆ. ಈ ನಡುವೆ ಅವರು ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಅತ್ಯಾಪ್ತ ಗೆಳೆಯ ಧನರಾಜ್ ಆಚಾರ್ ಅವರನ್ನು ಭೇಟಿ ಮಾಡಿದ್ದಾರೆ.
‘ದೋಸ್ತಾ ನೀ ಮಸ್ತಾ. ಗೆಲುವು ನಿನ್ನದು.. ಖುಷಿ ನನ್ನದು.. ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ. ಎಂದು ಬರೆದುಕೊಂಡಿದ್ದಾರೆ.
ಇನ್ನು ತನ್ನ ಗೆಳೆಯನ ಕೈಗೆ ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ಕೊಟ್ಟು ಹನುಮಂತು ಕೂಡ ಖುಷಿ ಪಟ್ಟಿದ್ದಾರೆ.