ಬೆಂಗಳೂರು: ಗಂಗಾ ಸ್ನಾನ ಮಾಡಿದರೆ ಬಡತನ ಕೊನೆಯಾಗುತ್ತಾ? ಅದು ನಿಮ್ಮ ಹೊಟ್ಟೆತುಂಬಿ ಸುತ್ತದೆಯೇ? ಬಿಜೆಪಿಯವರು ಕ್ಯಾಮರಾಗಳಲ್ಲಿ ಚೆನ್ನಾಗಿ ಸ್ನಾನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (mallikarjun kharge) ವ್ಯಂಗ್ಯ ವಾಡಿದ್ದಾರೆ.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಲವಾರು ಪಾಪಗಳನ್ನು ಮಾಡಿದ್ದಾರೆ. ಹೀಗಾಗಿ ಅವರು ಗಂಗಾ ನದಿಯಲ್ಲೇ ಎಷ್ಟೇ ಬಾರಿ ಸ್ನಾನ ಮಾಡಿ ದರೂ ಮುಂದಿನ ನೂರು ಜನ್ಮದಲ್ಲೂ ಸ್ವರ್ಗಕ್ಕೆ ಹೋಗಲಾರರು ಎಂದು ಕಿಡಿಕಾರಿದ್ದಾರೆ.
ಖರ್ಗೆ ಅವರ ಈ ಹೇಳಿಕೆ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದು, ಪ್ರಾಣಿ ಬಲಿ, ಗೋ ಹತ್ಯೆ, ಬಹು ಪತ್ನಿತ್ವ, ಮತಾಂತರ ಮಾಡಿದರೆ ಹೊಟ್ಟೆ ತುಂಬುತ್ತ ಖರ್ಗೆಯವರೇ..? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patila Yatnal) ಅವರು ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಸದಾ ಹಿಂದೂ ವಿರೋಧಿ ನಿಲುವು ಪ್ರದರ್ಶಿಸುವ ಸನ್ಮಾನ್ಯ ಖರ್ಗೆ ಅವರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದರೆ ಹೊಟ್ಟೆ ತುಂಬುತ್ತ ಎಂಬ ಅಪ್ರಸ್ತುತ, ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ.
ನದಿಗಳಲ್ಲಿ ಪುಣ್ಯಸ್ನಾನ ಮಾಡುವುದು ಹಿಂದೂ ಸಂಪ್ರದಾಯದ ಆಚರಣೆ. ನಮ್ಮ ಆಚರಣೆಗಳ ಬಗ್ಗೆ ನಿಮಗೆ ನಂಬಿಕೆ ಇಲ್ಲದಿದ್ದರೆ ನೀವು ಪಾಲಿಸಬೇಡಿ; ಹಾಗೆಂದು ಗಂಗೆಯಲ್ಲಿ ಮಿಂದರೆ ಹೊಟ್ಟೆ ತುಂಬುತ್ತ ಎಂಬ ಹೇಳಿಕೆಯನ್ನು ನೀಡುವುದು ಸನಾತನ ಧರ್ಮಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ.
ಅನ್ಯ ಕೋಮಿನಲ್ಲಿರುವ ಅಮಾನವೀಯ ಆಚರಣೆಗಳಾದ: ಪ್ರಾಣಿ ಬಲಿ, ಗೋ ಹತ್ಯೆ, ಬಹು ಪತ್ನಿತ್ವ, ಮತಾಂತರ ಮಾಡಿದರೆ ನಿಮ್ಮ ತರ್ಕಾನುಸಾರ ಹೊಟ್ಟೆ ತುಂಬುತ್ತ ಅಂತ ಹೇಳಿ ಎಂದು ಪ್ರಶ್ನಿಸಿದ್ದಾರೆ.