ಚಿಕ್ಕಬಳ್ಳಾಪುರ: ಕೆಲಸಕ್ಕೆಂದು ಹೊರ ಹೋದ 21 ವರ್ಷದ ಯುವತಿ ಕಾಣೆಯಾಗಿದ್ದು, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ತೆಗೆ ಮನವಿ (Request) ಮಾಡಿದ್ದಾರೆ..
ಚಿಂತಾಮಣಿ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನಿವಾಸಿ 21 ವರ್ಷದ ಗಗನ ಎಂಬ ಯುವತಿಯು ಜನವರಿ 22ರಂದು ಪೋಷಕರು ಚಿಂತಾಮಣಿ ನಗರಕ್ಕೆ ಕೆಲಸ ನಿಮಿತ ಹೋದ ಸಮಯದಲ್ಲಿ ನಾಪತ್ತೆಯಾಗಿದ್ದಾರೆ.
ಮನೆ, ಊರಿನ ಸುತ್ತಮುತ್ತ, ಸ್ನೇಹಿತರ, ಸಂಬಂಧಿರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಅವರ ತಂದೆ ಶಂಖರಪ್ಪ ಎಂಬುವರು ಕೆಂರ್ಚಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಚಹರೆ: ಗಗನ, 21 ವರ್ಷ ವಯಸ್ಸು, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ದುಂಡು ಮುಖ, 5.1 ಅಡಿ ಎತ್ತರವಿದ್ದು, ಕಪ್ಪು ಕೂದಲು, ಕಪ್ಪು ಕಲ್ಲರ್‌ಟಾಫ್, ಕಪ್ಪು ಬಣ್ಣದ ಜರ್ಕಿನ್, ನೀಲಿ ಕಲ್ಲರ್‌ಪ್ಯಾಂಟ್ ಧರಿಸುತ್ತಾರೆ, ಕನ್ನಡ ಮತ್ತು ತೆಲಗು ಮಾತನಾಡುತ್ತಾಳೆ.
ಈ ಯುವತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೆಂರ್ಚಾಲಹಳ್ಳಿ ಪೊಲೀಸ್ ಠಾಣೆ ಹಾಗೂ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.