Site icon ಹರಿತಲೇಖನಿ

ಅಕ್ರಮ ಆಸ್ತಿ.. ಚಿಕ್ಕಜಾಲ ಬಿಲ್ ಕಲೆಕ್ಟರ್ ಗೆ ಮೂರು ವರ್ಷ ಕಠಿಣ ಶಿಕ್ಷೆ, 50 ಲಕ್ಷ ದಂಡ..!

WhatsApp, e-mail notice not valid: Supreme Court

WhatsApp, e-mail notice not valid: Supreme Court

ಬೆಂ.ಗ್ರಾ.ಜಿಲ್ಲೆ: ಸರ್ಕಾರಿ ಸೇವಾವಧಿಯಲ್ಲಿ ತನ್ನ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆಂಬ ಮಾಹಿತಿಯ ಆಧಾರದ ಮೇಲೆ ಚಿಕ್ಕಜಾಲ ಬಿಲ್ ಕಲೆಕ್ಟರ್ ಕೃಷ್ಣಪ್ಪ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50.20 ಲಕ್ಷ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂ.ಜೆ.ದಯಾನಂದ್ ನೀಡಿದ ಸೋರ್ಸ್ ವರದಿಯ ಆಧಾರದ ಮೇಲೆ, ಸಬ್ ಇನ್ಸ್ಪೆಕ್ಟರ್ ವಿಜಯ್‌ ಕುಮಾರ್ ಪ್ರಕರಣವನ್ನು ದಾಖಲಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎನ್.ನವೀನ್ ಕುಮಾರ್‌ರವರು ಆರೋಪಿತರು ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ರೂ. 63,66,528 (400.78%) ಗಳಷ್ಟು ಹೆಚ್ಚುವರಿ ಆಸ್ತಿಯನ್ನು ಗಳಿಸಿರುವ ಬಗ್ಗೆ ಆರೋಪಿತರಾದ ಕೃಷ್ಣಪ್ಪ ರವರ ವಿರುದ್ದ ಸಿಸಿಹೆಚ್-24 ಬೆಂಗಳೂರು ನಗರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ವಿಚಾರಣೆ ನಡೆಸಲಾಗಿತ್ತು.

ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿತರು ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ಅಕ್ರಮ ಆಸ್ತಿಯನ್ನು ಹೊಂದಿರುವುದು ವಿಚಾರಣೆಯಿಂದ ದೃಢಪಟ್ಟ ಕಾರಣ 2025 ರ ಜನವರಿ 27ರಂದು ತೀರ್ಪು ಪ್ರಕಟಿಸಿದೆ.

ಆರೋಪಿತರಿಗೆ 03 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಮತ್ತು 50,20,000/-ರೂ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ 06 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನ್ಯಾಯಾಲಯ ತೀರ್ಪು ನೀಡಿದೆ ಎಂದು ಲೋಕಾಯುಕ್ತ ಎಸ್.ಪಿ ಪವನ್ ನೆಜ್ಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version