ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದ ಚತುರ್ದಶಿ ಜನವರಿ.28. 2025: ಈ ದಿನ ವಿಶೇಷವಾಗಿ ಲಲಿತಾ ಸಹಸ್ರನಾಮವನ್ನು ಕೇಳಿದರೆ ಶುಭವಲ ಉಂಟಾಗುತ್ತದೆ. Astrology
ಮೇಷ ರಾಶಿ: ಎಲ್ಲ ರೀತಿಯಲ್ಲೂ ಧೈರ್ಯ, ಕಾರ್ಯ ಸಾಧನೆ, ಕೆಲವು ಬಾರಿ ಬಂಧು ಮಿತ್ರರಲ್ಲಿ ಅಪನಂಬಿಕೆ, ವ್ಯವಹಾರ ಮಾಡುವವರಿಗೆ ಉತ್ತಮ ದಿನ.. ವ್ಯಾಪಾರಿಗಳಿಗೆ ಶುಭ ಧನ ಲಾಭ. (ಪರಿಹಾರಕ್ಕಾಗಿ ಶಿವ ಮಂತ್ರವನ್ನು ಜಪಿಸಿ)
ವೃಷಭ ರಾಶಿ: ಒಳ್ಳೆಯದಾಗುತ್ತದೆ, ದೇವರ ಅನುಗ್ರಹ ಜೊತೆಗೆ ಬಲ ನಿಮ್ಮ ಕಡೆ ಇದೆ.. ಚಿಂತೆ ಬೇಡ, ನಿಧಾನವಾಗಿ ಚಿಂತೆಯಿಂದ ಹೊರಬನ್ನಿ, ಧನ ಲಾಭ, ಸ್ವಲ್ಪ ನಿಧಾನಿಸಿದರು ಉತ್ತಮವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಮ್ಮನವರನ್ನು ಪೂಜೆ ಮಾಡಿ)
ಮಿಥುನ ರಾಶಿ: ಜೀವನವೆಂದರೆ ಆಟವಲ್ಲ ಎಂಬುದು ಚೆನ್ನಾಗಿ ಅರ್ಥವಾಗಿರುತ್ತದೆ.. ಒಂದೊಂದು ಬಾರಿ ಜೀವನವೇ ಬೇಡ ಎನಿಸಿಬಿಡುತ್ತದೆ, ಅಷ್ಟು ದುಃಖಕ್ಕೆ ಹೋಗುತ್ತೀರಿ. ತೃತಿಗೆಡಬೇಡಿ ಧೈರ್ಯವಾಗಿರಿ, ಎಲ್ಲವೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ಆಂಜನೇಯ ಮಂತ್ರವನ್ನು ಜನಿಸಿ)
ಕಟಕ ರಾಶಿ: ನಿಧಾನವಾಗಿ ಯೋಚಿಸಿ ಕೆಲಸಗಳನ್ನು ಮಾಡಿ. ಯಾವುದೇ ವಿಚಾರವಿದ್ದರೂ.. ದಿನೇ ದಿನೇ ಭಾದೆಯು ನಿವಾರಣೆ ಯಾಗುತ್ತದೆ. ಹರ್ಷ ಚಿತ್ತರಾಗಿರಿ, ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ)
ಸಿಂಹ ರಾಶಿ: ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ, ಅತಿಯಾದ ದುಃಖ ಬೇಡ ಒಳ್ಳೆಯದಾಗುತ್ತದೆ.. ಈಗಾಗಲೇ ಎರಡು ಮೂರು ಬಾರಿ ಒಳ್ಳೆಯ ಸುಖವನ್ನು ಅನುಭವಿಸಿದ್ದೀರಿ, ರೋಧಿಸುವ ಅವಶ್ಯಕತೆ ಇಲ್ಲ. (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)
ಕನ್ಯಾ ರಾಶಿ: ಧನಾಗಮ, ಬಂಧು ಮಿತ್ರರ ಬೇಟಿ, ಸಂತಸ, ಆರೋಗ್ಯ, ದೃಢವಾದ ನಿಶ್ಚಯವಾದ ನಿರ್ಧಾರ, ಅಧಿಕವಾಗಿ ಪ್ರೇಮ, ಭೂಮಿಯನ್ನು ಕೊಳ್ಳುವುದಕ್ಕೆ ಆಸಕ್ತಿ. (ಪರಿಹಾರಕ್ಕಾಗಿ ಕೃಷ್ಣನ ಸ್ಮರಣೆ ಮಾಡಿ)
ತುಲಾ ರಾಶಿ: ಯೋಚನೆ ಮಾಡಬೇಡಿ ಎಲ್ಲ ಕಾರ್ಯದಲ್ಲೂ ಶುಭವಾಗುತ್ತದೆ… ಪ್ರಯಾಸ ಮಾಡಿಕೊಳ್ಳಬೇಡಿ ನಿಧಾನವಾಗಿ ಆಲೋಚಿಸಿ ಕೆಲಸ ಕಾರ್ಯಗಳು ಮಾಡಿ, ಧನಾತ್ಮಕ ಮತ್ತು ವಿದ್ಯಾರ್ಜನೆ ಶುಭವಾಗಿದೆ. (ಪರಿಹಾರಕ್ಕಾಗಿ ಸೂರ್ಯನನ್ನು ಸ್ಮರಣೆ ಮಾಡಿ)
ವೃಶ್ಚಿಕ ರಾಶಿ: ಧೈರ್ಯವಾಗಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಿ.. ಮಾನಸಿಕವಾಗಿ ಸ್ವಲ್ಪ ಚಿಂತೆ ಇದೆ. ಎಲ್ಲ ಕಾರ್ಯದಲ್ಲೂ ಮನಸ್ಸನ್ನು ತೊಡಗಿಸಿ, ಇಲ್ಲವಾದರೆ ಜಯ ಅಪಜಯವಾಗುತ್ತದೆ. ಧನಾರ್ಜನೆ ಇಲ್ಲ, ವ್ಯಾಪಾರದಲ್ಲಿ ನಷ್ಟ, ಎಚ್ಚರಿಕೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)
ಧನಸ್ಸು ರಾಶಿ: ಕೆಲವು ಕಷ್ಟ ಪಡಬೇಕು.. ಕೆಲಸಗಳಲ್ಲಿ ಸ್ವಲ್ಪ ಕಷ್ಟವಾಗಿರುತ್ತದೆ, ಕೆಲವು ನೋವಿನ ವಿಚಾರಗಳು.. ದಾನದ ಬಗ್ಗೆ ಸ್ವಲ್ಪ ಆಲೋಚನೆ, ಮನಸ್ಸಿನಲ್ಲಿ ವಿಕಾರ.. ಎಲ್ಲವೂ ಇದ್ದರೂ ನಾನು ಎಂಬ ಸಣ್ಣ ಅಲಂಕಾರ, ಇದರಿಂದ ಕಷ್ಟ ನಷ್ಟಗಳು ಅನುಭವಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಭೇಟಿ ಕೊಡಿ)
ಮಕರ ರಾಶಿ: ಆಲೋಚನೆ ಮಾಡಿ ಮಾತನಾಡಿ, ದುಡ್ಡಿನ ಹಿಂದೆ ಓಡಬೇಡಿ ಅತಿಯಾಗಿ ತೊಂದರೆ ಕೊಡುತ್ತದೆ.. ಸ್ವಲ್ಪ ದಾನ ಧರ್ಮವನ್ನು ಅಭ್ಯಾಸ ಮಾಡಿ, ಜೀವನದ ಸಾರ್ಥಕ ಇರುತ್ತದೆ. (ಪರಿಹಾರಕ್ಕಾಗಿ ಮಹಾ ಸರಸ್ವತಿಯನ್ನು ಧ್ಯಾನ ಮಾಡಿ)
ಕುಂಭ ರಾಶಿ: ಎಲ್ಲರ ಜೊತೆ ಹೊಂದಿಕೊಂಡು ಹೋಗುವುದನ್ನು ರೂಢಿ ಮಾಡಿಕೊಳ್ಳಿ. ಎಲ್ಲರನ್ನೂ ಪ್ರೀತಿಸಿ, ಎಲ್ಲರೊಳಗೆ ಒಂದಾಗಿ ನೀವು ಸುಖವಾಗಿ ಇರುತ್ತೀರ.. ಜೊತೆಗೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)
ಮೀನ ರಾಶಿ: ಪ್ರಶಾಂತವಾದ ಮನಸ್ಸು, ದೀರ್ಘವಾದ ಆಲೋಚನೆ, ಅತಿಯಾಗಿ ಚಿಂತೆ ಬೇಡ.. ಮನಸ್ಸನ್ನು ಸಂಕಲ್ಪದ ಕಡೆ ನಡೆಸಿ, ಆಲೋಚನೆಯಿಂದ ಒಳ್ಳೆಯ ಕಾರ್ಯಗಳು ನಡೆಯುತ್ತವೆ. (ಪರಿಹಾರಕ್ಕಾಗಿ ಸದಾಶಿವನ ಪ್ರಾರ್ಥನೆ ಮಾಡಿ)
ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM
ಹೆಚ್ಚಿನ ಮಾಹಿತಿಗಾಗಿ; ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ. ಮೊ-9945170572