ಪ್ರಯಾಗರಾಜ: ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ (Maha Kumbhamela) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನೆರವೇರುತ್ತಿದ್ದು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿದೇಶಗಳಿಂದಲೂ ಜನರು ಬರುತ್ತಿದ್ದಾರೆ.
ಮಹಾಕುಂಭ ಆರಂಭವಾದಾಗಿನಿಂದ ಇಲ್ಲಿಯವರೆಗೆ 15 ದಿನಗಳಲ್ಲಿ, ಮಿಲಿಯನ್‌ಗಿಂತಲೂ ಹೆಚ್ಚು ಭಕ್ತರು, ನಾಗಾ ಸಾಧುಗಳು ಮತ್ತು ವಿವಿಧ ಮಠಾಧೀಶರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಉತ್ಸವದ 15ನೇ ದಿನದ ಇಂದಿನ ಅಂತ್ಯದ ವೇಳೆಗೆ ಒಟ್ಟು ಭಾಗವಹಿಸುವವರ ಸಂಖ್ಯೆ 100 ಮಿಲಿಯನ್ ಗಡಿಯನ್ನು ತಲುಪುವ ನಿರೀಕ್ಷೆಯಿದೆ.
ಈ ನಡುವೆ ಕುಂಭಮೇಳದಲ್ಲಿ ಮನಕಲುಕುವ ಘಟನೆಯೊಂದು ವರದಿಯಾಗಿದ್ದು, ಮಹಾ ಕುಂಭಮೇಳದಲ್ಲಿ ವೃದ್ಧ ದಂಪತಿಯ ವಿಡಿಯೋವೊಂದು ವೈರಲ್ ಆಗಿದೆ.
ವೀಡಿಯೋದಲ್ಲಿ ವೃದ್ಧ ದಂಪತಿ, ಕುಂಭಮೇಳದಲ್ಲಿ ಸಂಗ್ರಹವಾಗಿರುವ ಕಸದ ರಾಶಿಯಲ್ಲಿ ಮಕ್ಕಳು ಬಿಟ್ಟು ಹೋಗಿದ್ದಾರೆ.
ಕಣ್ಣೀರು ಹಾಕುತ್ತಾ ಕುಳಿತಿದ್ದ ಈ ವೃದ್ಧದಂಪತಿಗೆ ಪ್ರವಾಸಿಗರು ಹಣ ನೀಡಿ ಸಹಾಯ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ನಮಗೆ ಮಕ್ಕಳು, ಮೂವರು ಸೊಸೆಯಂದಿರು ಇದ್ದು, ಕುಂಭಮೇಳ ನೋಡಲು ಕರೆತಂದು ಬಿಟ್ಟು ಹೋಗಿದ್ದಾರೆ, ಅವರು ದುಷ್ಟರು ಎಂದು ತಿಳಿಸಿದ್ದಾರೆ.