ಮೈಸೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಲ್ಲಿಯೇ ಮಹಿಳೆಯೊಬ್ಬರು ಜೀವ ಬಿಟ್ಟಿದ್ದಾರೆ (Suicide).
ವಿಷದ ಮಾತ್ರೆಗಳನ್ನು ನುಂಗಿ 53 ವರ್ಷದ ಜಯಶೀಲಮ್ಮ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಾಳದೆ ಜಯಶೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎರಡು ಮೈಕ್ರೋ ಫೈನಾನ್ಸ್ ಬಳಿ 5 ಲಕ್ಷ ರೂ ಸಾಲ ಪಡೆದುಕೊಂಡಿದ್ದರೆನ್ನಲಾಗಿದೆ. ಮನೆ, ವ್ಯವಸಾಯ, ಹಸು ಸಾಕಾಣಿಕೆಗಾಗಿ ಜಯಶೀಲಮ್. ಸಾಲ ಮಾಡಿಕೊಂಡಿದ್ದು, ಪ್ರತಿ ತಿಂಗಳು 20 ಸಾವಿರ ರೂ. ಗೂ ಹೆಚ್ಚು ಇಎಂಐ ಪಾವತಿಸಬೇಕಿತ್ತಂತೆ.
ಸಾಲ ಮಾಡಿ ಖರೀದಿಸಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿದ್ದು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಜಯಶೀಲ ಕಂಗಾಲಾಗಿದ್ದಾರೆ.
ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿಗೆ ತಲುಪಿದ್ದ ಅವರು ಮನನೊಂದು ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಲ್ಲಹಳ್ಳಿಯಿಂದ ವಿಷದ ಮಾತ್ರೆ ತಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು ತನಿಖೆ ನಡೆಸಿದ್ದಾರೆ.