ಥಾಣೆ (Video): ಬಹುಮಹಡಿ ಕಟ್ಟಡದ ಮಹಡಿಯಿಂದ ಜಾರಿ ಬಿದ್ದ ಮಗುವಿನ ಜೀವವನ್ನು ದಾರಿಹೋಕ ಯುವಕನೋರ್ವ ರಕ್ಷಿಸಿದ್ದಾನೆ.
ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, 13ನೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ಪವಾಡವೆಂಬಂತೆ ಬದುಕುಳಿದಿದೆ.
ಮಗು ಕೆಳಗೆ ಬೀಳುತ್ತಿರೋದನ್ನು ನೋಡಿದ ವ್ಯಕ್ತಿಯೊಬ್ಬ ದೇವದೂತರಂತೆ ಬಂದು ರಕ್ಷಿಸಿದ್ದಾನೆ.
ಬಾಲ್ಕನಿ ಮೇಲಿನಿಂದ ಆಯತಪ್ಪಿ ಬಿದ್ದ ಮಗುವನ್ನು ಹಿಡಿಯಲು ಪ್ರಯತ್ನಿಸಿದನು ಮತ್ತು ಬಹುತೇಕ ಅವನ ಕೈಗೆ ತೆಗೆದುಕೊಂಡನು. ಆದರೆ ಮಗು ಅವನ ಕೈಯಿಂದ ಜಾರಿಹೋಗಿದೆ. ಆದಾಗ್ಯೂ, ಮಗುವಿನ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ.
ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲ್ಕನಿಯ ಅಂಚಿನಲ್ಲಿ ಸ್ವಲ್ಪ ಹೊತ್ತು ನೇತಾಡಿದ ಬಳಿಕ ಕೆಳಗೆ ಬಿದ್ದಿದ್ದಾಳೆ ಎಂದು ಹೇಳಲಾಗಿದೆ.