ಹುಬ್ಬಳ್ಳಿ: ಪತ್ನಿಯ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಪೀಟರ್ ಎಂದು ಗುರುತಿಸಲಾಗಿದೆ. ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪೀಟರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡತಿದ್ದ ಪೀಟರ್ ಹಾಗೂ ಆತನ ಪತ್ನಿ ಪಿಂಕಿ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಡ್ಯಾಡಿ ಐಯಾಮ್ ಸಾರಿ, ( ಅಪ್ಪ ನನ್ನನ್ನು ಕ್ಷಮಿಸಿ) ನನ್ನ ಹೆಂಡತಿ ನನ್ನ ಸಾವನ್ನು ಬಯಸುತ್ತಿದ್ದಾಳೆ ಎಂದು ತಂದೆಯ ಹೆಸರನ್ನು ಉಲ್ಲೇಖಿಸಿ, ಪತ್ನಿಯ ಟಾರ್ಚರ್‌ನಿಂದ ನಾನು ಸಾಯುತ್ತಿದ್ದೇನೆ ಎಂದು ಪೀಟರ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಪೀಟರ್ ಕುಟುಂಬಸ್ಥರು ಶವಪೆಟ್ಟಿಗೆಯ ಮೇಲೆ ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೇನು ಎಂದು ಬರೆಸಿ, ಅಂತ್ಯಕ್ರಿಯೆ ನಡೆಸಿದ್ದಾರೆಂದು ವರದಿಯಾಗಿದೆ
ಘಟನೆ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.