ದೊಡ್ಡಬಳ್ಳಾಪುರ (Doddaballapura): ಭಾನುವಾರ ನಿಧನರಾಗಿದ್ದ ಖಾನಖಾ ಯೇ ಸೂಫಿ ಔಲಿಯಾದ ಪಿರೇ ಮುರಶಿದ್ ಹಾಜ್ರತ್ ಸೂಫಿ ಇಮ್ತಿಯಾಜ್ ಹುಸೈನ್ ಚಿಸ್ತಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಕಂಟನಕುಂಟೆ ಸಮೀಪದ ಟಿಪ್ಪು ನಗರದಲ್ಲಿ ಸಂಜೆ ಸೂಫಿ ವಿಧಿ ವಿಧಾನಗಳಂತೆ ಟಿಪ್ಪುನಗರದ ಖಾನ್ಖಾನಲ್ಲಿ(ಮಠದಲ್ಲಿ) ನಡೆಯಿತು.
ಖಾನಖಾ ಯೇ ಸೂಫಿ ಔಲಿಯಾದ ಪಿರೇ ಮುರಶಿದ್ ಹಾಜ್ರತ್ ಸೂಫಿ ಇಮ್ತಿಯಾಜ್ ಹುಸೈನ್ ಚಿಸ್ತಿ ಅವರ ಅಂತಿಮ ದರ್ಶನ ಪಡೆಯಲು ಸೋಮವಾರ ಜಾತಿ, ಧರ್ಮ ಎನ್ನದೆ ಸಾವಿರಾರು ಜನ ಅವರ ಅನುಯಾಯಿಗಳು ಹೊರ ರಾಜ್ಯ, ಜಿಲ್ಲೆಗಳಿಂದಲು ಭಕ್ತಾದಿಗಳು ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.
ಆರ್.ಎಲ್.ಜಾಲಪ್ಪ ವಿದ್ಯಾ ಸಮಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಸೇರಿದಂತೆ ಇತರೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಮೃತರಿಗೆ ಪತ್ನಿ, ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ.