ದೊಡ್ಡಬಳ್ಳಾಪುರ (Death News): ತಾಲ್ಲೂಕಿನ ಕಂಟನಕುಂಟೆ ಸಮೀಪದ ಟಿಪ್ಪುನಗರದಲ್ಲಿನ ಖಾನಖಾ ಯೇ ಸೂಫಿ ಔಲಿಯಾದ ಪಿರೇ ಮುರಶಿದ್ ಹಾಜ್ರತ್ ಸೂಫಿ ಇಮ್ತಿಯಾಜ್ ಹುಸೈನ್ ಚಿಸ್ತಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಸಾವಿರಾರು ಜನ ಭಕ್ತರನ್ನು ಹೊಂದಿದ್ದ ಇವರು ಮುಂಬೈ, ಹೈದರಾಬಾದ್, ಕೋಲ್ಕತ್ತ, ಮೈಸೂರು, ಬೆಂಗಳೂರು ನಗರ ಹಾಗೂ ತಾಲ್ಲೂಕಿನಲ್ಲೂ ಅಪಾರ ಸಂಖ್ಯೆ ಭಕ್ತರನ್ನು ಹೊಂದಿದ್ದರು.
ಮೃತರಿಗೆ ಪತ್ನಿ, ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ.
ಸೋಮುವಾರ ಸಂಜೆ ಸೂಫಿ ವಿಧಿ ವಿಧಾನಗಳಂತೆ ಟಿಪ್ಪುನಗರದ ಖಾನ್ಖಾನಲ್ಲಿ(ಮಠದಲ್ಲಿ) ಅಂತ್ಯಕ್ರಿಯೆ ನಡೆಯಲಿದೆ.